ವಿಯೆಟ್ನಾಮ್ ಅಧ್ಯಕ್ಷ ವೊ ವ್ಯಾನ್ ತುವಾಂಗ್ ರಾಜೀನಾಮೆ

ಹನೋಯ್: ವಿಯೆಟ್ನಾಮ್ ಅಧ್ಯಕ್ಷ ವೊ ವ್ಯಾನ್ ತುವಾಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷವು ಬುಧವಾರ (ಮಾರ್ಚ್ 20) ಈ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ತುವಾಂಗ್ ಪಕ್ಷದ ನಿಯಮಗಳನ್ನ ಉಲ್ಲಂಘಿಸಿದ್ದಾರೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. “ಆ ನ್ಯೂನತೆಗಳು ಸಾರ್ವಜನಿಕ ಅಭಿಪ್ರಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ. ಪಕ್ಷ, ರಾಜ್ಯ ಮತ್ತು ವೈಯಕ್ತಿಕವಾಗಿ ಅವರ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರಿದೆ” ಎಂದು ಹೇಳಿದೆ.