ಸಿಲಿಕಾನ್ ಸಿಟಿಯಲ್ಲಿ ಟೋಯಿಂಗ್ ತಾತ್ಕಾಲಿಕ ಸ್ಥಗಿತ!

ಬೆಂಗಳೂರು : ಇತ್ತಿಚಿಗೆ ಟೋಯಿಂಗ್ ಸಿಬ್ಬಂದಿ ಸಾರ್ವಜನಿಕರ ಮದ್ಯೆ ನಡೆದ ಗದ್ದಲ,ಗಲಾಟೆಗಳ ನಡುವೆ ಪೊಲೀಸ್ ಇಲಾಖೆಯು ಸರಣಿ ಮಿಟಿಂಗ್ ಳನ್ನು ನಡೆಸಿ ಸದ್ಯ 15 ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಟೋಯಿಂಗ್ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ರಾಜಧಾನಿಯಲ್ಲಿನ ವಾಹನ ಟೋಯಿಂಗ್ ವ್ಯವಸ್ಥೆ ಸಂಬಂಧ ಇನ್ನು ಹದಿನೈದು ದಿನಗಳಲ್ಲಿ ಹೊಸ ಹಾಗೂ ಸರಳೀಕೃತ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಅಲ್ಲಿವರೆಗೂ ಸರ್ಕಾರ ಟೋಯಿಂಗ್ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ. ನಗರದಲ್ಲಿ ಟೋಯಿಂಗ್ ವ್ಯವಸ್ಥೆ ಹೊಸ ನೀತಿ ಪರಿಷ್ಕರಣೆ ಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಮುಂದಿನ ಹದಿನೈದು ದಿನಗಳಲ್ಲಿ ಹೊಸ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರುವ ವಿಶ್ವಾಸವಿದೆ. ಹೊಸ ವ್ಯವಸ್ಥೆ ಘೋಷಣೆ ಮಾಡುವವರೆಗೆ ಟೋಯಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ ಗುರುವಾರದಿಂದ ಸಂಚಾರ ಪೊಲೀಸರು ದಂಡ ವಿಧಿಸಲಿದ್ದಾರೆ ಎಂದು ತಿಳಿಸಿದರು.