90ರ ದಶಕದ ಜನಪ್ರಿಯ "ಶಕ್ತಿಮಾನ್" ಧಾರಾವಾಹಿ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧತೆ

ಮುಂಬೈ : ಭಾರತೀಯ ಚಿತ್ರರಂಗದಲ್ಲಿ 90ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಧಾರಾವಾಹಿ ಎಳೆಯರಿಗಷ್ಟೇ ಅಲ್ಲ ವಯಸ್ಕರಿಗೂ ಬಹಳ ಇಷ್ಟವಾಗಿತ್ತು. ಭಾರತೀಯ ಟಿವಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಧಾರಾವಾಹಿಗಳಲ್ಲಿ ಇದೂ ಕೂಡ ಒಂದಾಗಿತ್ತು.
ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಭಾರತದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ಶಕ್ತಿಮಾನ್ನನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು ತಂಡ ಒಂದು ಸಜ್ಜಾಗಿದ್ದು, ಈ ಚಿತ್ರದಲ್ಲಿ ನಟ ರಣವೀರ್ ಸಿಂಗ್ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮಾಲಿವುಡ್ನ ಖ್ಯಾತ ನಿರ್ದೇಶಕ ಬಾಸಿಲ್ ಜೋಸೆಫ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಸುದ್ದಿ ಮೂಲಗಳ ಪ್ರಕಾರ ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಶಕ್ತಿಮಾನ್ ಸಿನಿಮಾ ಸೆಟ್ಟೇರಲಿದೆ ಎಂದು ವರದಿಯಾಗಿದೆ.