ಮಾಜಿ ಸಿಎಂ ಬಿಎಸ್‌ವೈಗೆ ಮತ್ತೆ ರಿಲೀಫ್ : ಸೆ.19ಕ್ಕೆ ವಿಚಾರಣೆ ಮುಂದೂಡಿಕೆ

ಮಾಜಿ ಸಿಎಂ ಬಿಎಸ್‌ವೈಗೆ ಮತ್ತೆ ರಿಲೀಫ್ : ಸೆ.19ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಪೋಸ್ಕೋ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಕೊಂಚ ರಿಲೀಫ್‌ ಸಿಕ್ಕಿದೆ. ಬಿಎಸ್‌ವೈ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ವಿಭಾಗೀಯ ಪೀಠ ಸೆ.೧೯ಕ್ಕೆ ಮುಂದೂಡಿದೆ. 

ವಿಚಾರಣೆಯನ್ನು ಮುಂದೂಡುವಂತೆ ಎಸ್‌ಪಿಪಿ ನಾಗೇಶ್‌ ನಾಯಕ್‌ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ.