ಪೊಲೀಸರೇ ಇನ್ಮುಂದೆ ನಿಮಗೆ 'ಬಾಡಿ ಕ್ಯಾಮೆರಾ' ಕಡ್ಡಾಯ

ಪೊಲೀಸರೇ ಇನ್ಮುಂದೆ ನಿಮಗೆ 'ಬಾಡಿ ಕ್ಯಾಮೆರಾ' ಕಡ್ಡಾಯ

ಬೆಂಗಳೂರು:ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಇದಕ್ಕಾಗಿಯೇ ಇನ್ಮುಂದೆ ಪೊಲೀಸರು ತಮ್ಮ ದೇಹಕ್ಕೆ ಬಾಡಿ ಕ್ಯಾಮೆರಾ ಅಳವಡಿಸಬೇಕಿದ್ದು, ಇದನ್ನ ಈಗ ಕಡ್ಡಾಯ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಅಪರಾಧ ನಡೆದ ಸ್ಥಳಕ್ಕೆ ಪೊಲೀಸರು ತೆರಳುವ ಮುನ್ನ, ಅವರು ಬಾಡಿ ಕ್ಯಾಮೆರಾ ಧರಿಸಲೇಬೇಕಿದೆ. ಒಂದು ವೇಳೆ ಕ್ಯಾಮೆರಾ ಅಳವಡಿಸಿಕೊಳ್ಳದೇ ಇರೋರ ವಿರುದ್ಧ ಕ್ರಮಕೈಗೊಳ್ಳಾಗುವುದು ಅಂತಲೂ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.