'ಎಸ್-400 ಮುಂದೆ ಮೋದಿ': ವಾಸ್ತವವಿದೆ, ವಾದವಲ್ಲ! ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ

'ಎಸ್-400 ಮುಂದೆ ಮೋದಿ': ವಾಸ್ತವವಿದೆ, ವಾದವಲ್ಲ! ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ

ಪಂಜಾಬ್ : ದೇಶ ರಕ್ಷಣೆಯಲ್ಲಿ ರಕ್ಷಣಾ ಪಡೆಗಳ ಪಾತ್ರವನ್ನು ಕೊಂಡಾಡಿರುವ ಪ್ರಧಾನಿ ಮೋದಿ, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಸೇನೆಯ ಮೂರೂ ಅಂಗಗಳು ತೋರಿದ ಅಸಾಮಾನ್ಯ ಧೈರ್ಯದ ಪ್ರದರ್ಶನಕ್ಕೆ ತಲೆಬಾಗಿದ್ದಾರೆ. 

ಆದಂಪುರ್‌ ವಾಯುನೆಲೆಯಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಹೆಮ್ಮೆಯ ಯೋಧರಿಗೆ ಸದಾ ಆಭಾರಿಯಾಗಿರುತ್ತದೆ ಎಂದು ಮೋದಿ ಹೇಳಿದರು. "ಭಾರತ್‌ ಮಾತಾ ಕೀ ಜೈ ಎಂಬುದು ಕೇವಲ ಒಂದು ಘೋಷಣೆಯಲ್ಲ. ಇದು ಭಾರತದ ಅಸ್ಮಿತೆಯ ಪ್ರತೀಕ. ಭಾರತದ ಗಡಿಗಳಲ್ಲಿ ನಮ್ಮ ಸೈನಿಕ ಈ ಘೋಷಣೆ ಕೂಗಿದಾಗ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟುತ್ತದೆ ಎಂದು ಪ್ರಧಾನಿ ಮೋದಿ ಹೆಮ್ಮೆಯಿಂದ ಹೇಳಿದರು. 

ಪ್ರಧಾನಿ ಮೋದಿ ಅವರು, ಭಾರತೀಯ ವಾಯುಪಡೆಯ ಶಕ್ತಿಶಾಲಿ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮುಂದೆ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದ ನಕಲಿ ವರದಿಯಲ್ಲಿ ಎಸ್‌- 400 ಅನ್ನು ನಾಶಪಡಿಸಿದ್ದೇವೆ. ವಾಯುನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು. ಆದರೆ ‘ಪಾಕಿಸ್ತಾನ ಅಂತಹ ಯಾವುದೇ ದಾಳಿ ಮಾಡಿಲ್ಲ, ಅದು ಸುಳ್ಳು’ ಎಂದು PIB ಸ್ಪಷ್ಟಪಡಿಸಿದ್ದಾರೆ. 

ಇದೀಗ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರು ಈ ವಿಡಿಯೋವನ್ನು "ಪಾಕಿಸ್ತಾನಕ್ಕೆ ವಾಸ್ತವ ಪರಿಶೀಲನೆ' ಎಂಬ ಶೀರ್ಷಿಕೆಯಲ್ಲಿ ಹಂಚಿಕೊಂಡಿದ್ದಾರೆ. 

ಆದಂಪುರ ವಾಯುನೆಲೆಯಲ್ಲಿ ಎಸ್-400 ಎದುರು ಪ್ರಧಾನಿ ಮೋದಿ ಅವರು ನಿಂತಿರುವುದು, ಪಾಕಿಸ್ತಾನದ ನಕಲಿ ಆರೋಪಗಳಿಗೆ ತಿರುಗೇಟು ನೀಡಿದಂತೆ, ಮೋದಿ ಅವರ ಚಿತ್ರ ಹಾಗೂ ವಿಡಿಯೋವು, ನಿಜಕ್ಕೂ ಭದ್ರತೆ ಹೇಗಿರಬೇಕು ಎಂಬುದನ್ನು ತೋರಿಸುತ್ತಿದೆ.