ಉತ್ತರಾಖಂಡನಲ್ಲೀಗ ಹಿಮದ ಕಾಟ: ಇಲ್ಲಿ ದೇವಸ್ಥಾನಗಳೆಲ್ಲ ಕ್ಲೋಸ್

ಉತ್ತರಾಖಂಡನಲ್ಲೀಗ ಹಿಮದ ಕಾಟ: ಇಲ್ಲಿ ದೇವಸ್ಥಾನಗಳೆಲ್ಲ ಕ್ಲೋಸ್

ಉತ್ತರಾಖಂಡ: ಮಳೆಯ ಅಬ್ಬರಕ್ಕೆ ಇಡೀ ಉತ್ತರಾಖಂಡ ತತ್ತರಿಸಿದೆ.ಆದರೆ ಈಗ ಇಲ್ಲಿಯ ಜನರನ್ನ ಹಿಮ ಕಾಡುತ್ತಿದೆ.ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.ಅದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಮೋಲಿ ಜಿಲ್ಲೆಯ ಹೇಮಕುಂಡ್ ಸಾಹಿಬ್ ಗುರುದ್ವಾರ ಹಿಮದಿಂದ ಸಂಪೂರ್ಣ ಆವರಿಸಿಕೊಂಡಿದೆ. ಗುರುದ್ವಾರ ಕ್ಲೋಸ್ ಆಗಿರೋ ಒಂದೇ ಒಂದು ಫೋಟೋವನ್ನ ANI ಸುದ್ದಿ ಸಂಸ್ಥೆ ತನ್ನ ಸಾಮಾಜಿಕ ತಾಣದ ಪೇಜ್ ಅಲ್ಲಿ ಅಪ್ ಲೋಡ್ ಮಾಡಿದೆ. ಈ ಫೋಟೋ ನೋಡಿದ್ರೆ ಸಾಕು. ಇಲ್ಲಿಯ ಪರಿಸ್ಥಿತಿ ತಿಳಿದು ಬಿಡುತ್ತದೆ. ಇದರೊಟ್ಟಿಗೆ ಇಲ್ಲಿಯ ಜನರ ಜೀವನ ನಿರಂತರ ಸುರಿಯೋ ಹಿಮದಿಂದಲೂ ದುಸ್ತರವಾಗಿದೆ.