'ತಾಜ್’ ನ 22 ಬಾಗಿಲ ರಹಸ್ಯ : ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

'ತಾಜ್’ ನ 22 ಬಾಗಿಲ ರಹಸ್ಯ : ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ಲಖನೌ : ತಾಜ್ ಮಹಲ್ ನ 22 ಕೊಠಡಿಗಳನ್ನು ತೆರೆದು ಹಿಂದು ವಿಗ್ರಹ, ಗ್ರಂಥಗಳಿವೆಯೇ ಎಂದು ಪರಿಶೀಲಿಸಲು ಅಲಹಾಬಾದ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ ತಿರಸ್ಕರಿಸಿದೆ. ಹೌದು ತಾಜ್ ಮಹಲ್ ವಾಸ್ತವವಾಗಿ ಹಿಂದು ದೇವರಾದ ಶಿವನಿಗೆ ಮುಡಿಪಾದ ಹಳೆಯ ದೇವಸ್ಥಾನವಾಗಿತ್ತು ಹಾಗೂ ತೇಜೋ ಮಹಾಲಯ ಎಂದು ತಿಳಿಯಲಾಗಿತ್ತು ಎಂದು ಹಲವು ಹಿಂದುತ್ವ ಗುಂಪುಗಳು ಹೇಳುತ್ತಿವೆ, ಇದನ್ನು ಹಲವು ಇತಿಹಾಸತಜ್ಞರೂ ಪುಷ್ಠೀಕರಿಸಿದ್ದಾರೆ, ಎಂದು ಅರ್ಜಿಯಲ್ಲಿ ಹೇಳಲಾಗಿದೆ. 

ಆಗ್ರಾದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ತಾಜ್ ಮಹಲ್ ನಿರ್ವಹಣೆ ಮಾಡುತ್ತಿದ್ದು, ಭವ್ಯ ಕಟ್ಟಡದೊಳಗಿನ ಕೆಲವು ಕೊಠಡಿಗಳಲ್ಲಿ ಏನಿದೆ ಎಂಬ ವಿವರಗಳನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ಅರ್ಜಿದಾರರು ಪ್ರತಿಪಾದಿಸಿ, ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 

ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ನ್ಯಾಯಾಲಯ, "ಈ ವಿಷಯವಾಗಿ ಸತ್ಯಶೋಧನೆ ಸಮಿತಿ ರಚನೆಗೆ ಕೇಳುವುದು ನಿಮ್ಮ ಹಕ್ಕುಗಳ ಅಡಿಯಲ್ಲಿ ಬರುವುದಿಲ್ಲ. ಅದು ಆರ್ ಟಿಐ ನ ವ್ಯಾಪ್ತಿಗೂ ಬರುವುದಿಲ್ಲ.ನಾಳೆ ನೀವು ಕೋರ್ಟ್ ಚೇಂಬರ್ ಒಳಗೆ ಏನಿದೆ ಎಂದು ಕೇಳುತ್ತೀರಿ ಎಂದು ಛೀಮಾರಿ ಹಾಕಿ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದೆ. 

ಹಕ್ಕುಗಳನ್ನು ಉಲ್ಲಂಘಿಸಿದಾಗ ಮಾತ್ರ ಪ್ರಶ್ನಿಸಬಹುದು. ನಿಮ್ಮ ಯಾವ ಹಕ್ಕುನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರಿಗೆ ಕೋರ್ಟ್ ಪ್ರಶ್ನಿಸಿದೆ. ಅರ್ಜಿದಾರರ ಈ ವಾದವನ್ನು ಒಪ್ಪುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.