Stock Market : ಸೆನ್ಸೆಕ್ಸ್ 2227 ಪಾಯಿಂಟ್ಸ್ ಢಮಾರ್! ನಿಫ್ಟಿ 743 ಪಾಯಿಂಟ್ಸ್ ಕುಸಿತ

ಮುಂಬೈ : ಭಾರತೀಯ ಷೇರುಪೇಟೆಯು ಸೋಮವಾರ 10 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತಗೊಂಡಿದ್ದು, ಯುಎಸ್ ಪ್ರತಿಸುಂಕದಿಂದಾಗಿ ಜಾಗತಿಕ ಮಾರುಕಟ್ಟೆಯು ದೊಡ್ಡ ಪತನವಾಗಿದೆ. ಭಾರತ ಅಷ್ಟೇ ಅಲ್ಲದೆ ಬಹುತೇಕ ಎಲ್ಲಾ ಷೇರು ಮಾರುಕಟ್ಟೆಯು ಭಾರೀ ಕರೆಕ್ಷನ್‌ಗೆ ಸಾಕ್ಷಿಯಾಗಿದೆ.
ಸೆನ್ಸೆಕ್ಸ್ ಸೂಚ್ಯಂವು 2226.79 ಪಾಯಿಂಟ್ಸ್ ಅಥವಾ 2.95 ಪರ್ಸೆಂಟ್ ಇಳಿಕೆಗೊಂಡು 73,137.90 ಮಾರ್ಕ್‌ನಲ್ಲಿ ಮುಚ್ಚಿದೆ. ಇದೇ ವೇಳೆಯಲ್ಲಿ ನಿಫ್ಟಿ ಸೂಚ್ಯಂಕವು 742.85 ಪಾಯಿಂಟ್ಸ್ ಅಥವಾ 3.24 ಪರ್ಸೆಂಟ್ ತಗ್ಗಿದ್ದು 22,161.60 ಮಾರ್ಕ್ ತಲುಪಿದೆ.
ಸೋಮವಾರ ಸೆಷನ್‌ನಲ್ಲಿ ಜಪಾನ್‌ನ ನಿಕ್ಕಿ ಸೇರಿದಂತೆ ಏಷ್ಯಾದ ಬಹುತೇಕ ಮಾರುಕಟ್ಟೆಗಳು ಹೀನಾಯ ಕುಸಿದಿದ್ದು, 16 ವರ್ಷದಲ್ಲೇ ಅತ್ಯಂತ ಕೆಟ್ಟ ಕರೆಕ್ಷನ್ ಇದಾಗಿದೆ. ಹಾಂಗ್ ಸೆಂಗ್ 15 ಪರ್ಸೆಂಟ್ ಇಳಿಕೆಯಾಗಿದ್ದು, 2008ರ ಬಳಿಕ ಅತಿದೊಡ್ಡ ಇಂಟ್ರಾಡೇ ಕುಸಿತ ಇದಾಗಿದೆ.
ಟ್ರೆಂಟ್, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಶ್ರೀರಾಮ್ ಫೈನಾನ್ಸ್, ಎಲ್&ಟಿ ಕುಸಿದಿದ್ದು, ಜೊಮ್ಯಾಟೊ ಹಾಗೂ ಹಿಂದೂಸ್ತಾನ್ ಯುನಿಲಿವರ್ ಟಾಪ್ ಗೇನರ್‌ಗಳಾಗಿವೆ.
ಕೋವಿಡ್-19 ನಂತರದಲ್ಲಿ ಭಾರೀ ಕುಸಿತಗೊಂಡ ಷೇರುಪೇಟೆಯಿಂದಾಗಿ ಹೂಡಿಕೆದಾರರು 12 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.