ಲಾಭದೊಂದಿಗೆ ವಹಿವಾಟು ಮುಗಿಸಿದ ಷೇರುಪೇಟೆ

ಭಾರತೀಯ ಷೇರುಪೇಟೆ ಇಂದು ಲಾಭದೊಂದಿಗೆ ವಹಿವಾಟು ಮುಗಿಸಿದೆ. ಬಿಎಸ್‌ಇ ಸೆನ್ಸೆಕ್ಸ್ 1,508 ಅಂಕಗಳ ಏರಿಕೆ ಕಂಡು 78,553 ಕ್ಕೆ ತಲುಪಿದೆ.
ನಿಫ್ಟಿ 414 ಅಂಕಗಳ ಏರಿಕೆ ಕಂಡು 23,851ಕ್ಕೆ ತಲುಪಿದೆ. ಬ್ಯಾಂಕಿಂಗ್, ತೈಲ ಮತ್ತು ಅನಿಲ ವಲಯಗಳ ಷೇರುಗಳು ಏರಿಕೆ ಕಂಡಿವೆ. ಎಟರ್ನಲ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಎಸ್‌ಬಿಐ, ಬಜಾಜ್ ಫಿನ್‌ಸರ್ವ್ ಮತ್ತು ರಿಲಯನ್ಸ್ ಷೇರುಗಳು ಹೆಚ್ಚಿನ ಲಾಭಗಳಿಸಿದ ಪಟ್ಟಿಗೆ ಸೇರಿವೆ.