21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಭುವನ ಸುಂದರಿ ಪಟ್ಟ...

21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಭುವನ ಸುಂದರಿ ಪಟ್ಟ...

21 ವರ್ಷಗಳ ಬಳಿಕ ಮಿಸ್ ಯುನಿವರ್ಸ್ ಕಿರೀಟ ಭಾರತಕ್ಕೆ ಒಲಿದಿದೆ. ಪಂಜಾಬ್ ನ ಹರ್ನಾಜ್ ಸಂಧು 2021ರ ಮಿಸ್ ಯುನಿವರ್ಸ್ ಆಗಿ ಹೊರಹೊಮ್ಮಿದ್ದಾರೆ. ಹರ್ನಾಜಾ ಸಂಧು, ಮೂಲತಃ ಪಂಜಾಬ್‌ನ ಚಂಡೀಗಢದವರು. ಇಸ್ರೇಲ್ನ ಇಲಾಟ್ ನಗರದಲ್ಲಿ ನಡೆದ 70 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 80 ಸ್ಪರ್ಧಿಗಳನ್ನು ಹಿಂದಿಕ್ಕಿ ಹರ್ನಾಜ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಸಂಧು ಅವರಿಗಿಂತ ಮೊದಲು ಇಬ್ಬರು ಭಾರತೀಯರು ಮಾತ್ರ ಮಿಸ್ ಯೂನಿವರ್ಸ್ ಪ್ರಶಸ್ತಿ ಪಡೆದಿದ್ರು. ನಟಿ ಸುಶ್ಮಿತಾ ಸೇನ್ 1994 ರಲ್ಲಿ ಮತ್ತು ಲಾರಾ ದತ್ತಾ 2000 ರಲ್ಲಿ ಭುವನ ಸುಂದರಿ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಇದೀಗ ಹರ್ನಾಜ್ ನಮ್ಮ ದೇಶದ ಮೂರನೇ ಭುವನ ಸುಂದರಿಯಾಗಿ ಹೊರಹೊಮ್ಮಿದ್ದಾರೆ.