ಷೇರು ಮಾರುಕಟ್ಟೆಯಲ್ಲಿ ಶಾಕ್ : ಸೆನ್ಸೆಕ್ಸ್ 1000, ನಿಫ್ಟಿ 300 ಪಾಯಿಂಟ್ ಕುಸಿತ, 5 ಲಕ್ಷ ಕೋಟಿ ಲಾಸ್

ನವದೆಹಲಿ : ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಅಕ್ಷರಶಃ ಭೂಕಂಪ ಸಂಭವಿಸಿದ್ದು, ಸೆನ್ಸೆಕ್ಸ್-ನಿಫ್ಟಿ ಭಾರಿ ಕುಸಿತದೊಂದಿಗೆ ವಹಿವಾಟು ನಡೆಸುತ್ತಿದೆ. ಸೆನ್ಸೆಕ್ಸ್ ಇಂದು 1000 ಅಂಕಗಳ ಕುಸಿತವನ್ನ ತೋರಿಸುತ್ತಿದ್ರೆ, ನಿಫ್ಟಿ ಕೂಡ 300 ಅಂಕಗಳನ್ನ ಕುಸಿದು ವಹಿವಾಟು ನಡೆಸುತ್ತಿದೆ.
ಈ ಎರಡೂ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ಶೇಕಡಾ 1.5 ಕ್ಕಿಂತ ಹೆಚ್ಚು ಕುಸಿಯುವ ಮೂಲಕ ವಹಿವಾಟು ನಡೆಸುತ್ತಿವೆ. ಹೂಡಿಕೆದಾರರು ಭಾರಿ ನಷ್ಟವನ್ನ ಎದುರಿಸುತ್ತಿದ್ದಾರೆ. ಇನ್ನು ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ 5 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.
ಇಂದು ಷೇರುಪೇಟೆಯಲ್ಲಿ ಆಲ್ ರೌಂಡ್ ರೆಡ್ ಮಾರ್ಕ್ ಗೋಚರಿಸುತ್ತಿದೆ. ಬಿಎಸ್‌ಇ ಸೆನ್ಸೆಕ್ಸ್ 1,013.22 ಪಾಯಿಂಟ್ ಅಥವಾ 1.52 ರಷ್ಟು ಕುಸಿದು 65,446.09 ಮಟ್ಟಕ್ಕೆ ತಲುಪಿದೆ. ಅದೇ ಸಮಯದಲ್ಲಿ, NSE ಯ ನಿಫ್ಟಿ 300.60 ಪಾಯಿಂಟ್ ಅಥವಾ 1.52 ಶೇಕಡಾ ಕುಸಿತದೊಂದಿಗೆ 19,432.95 ಮಟ್ಟಕ್ಕೆ ಇಳಿದಿದೆ.
ಬ್ಯಾಂಕ್ ನಿಫ್ಟಿಯಲ್ಲೂ ಭಾರಿ ಕುಸಿತ ಕಂಡು ಬರುತ್ತಿದ್ದು, ಇಂದು 800ಕ್ಕೂ ಹೆಚ್ಚು ಅಂಕಗಳ ಕುಸಿತದೊಂದಿಗೆ ವಹಿವಾಟು ನಡೆಸುತ್ತಿದೆ. ಬ್ಯಾಂಕ್ ನಿಫ್ಟಿ 863 ಪಾಯಿಂಟ್ ಅಥವಾ 1.89 ಶೇಕಡಾ ಕುಸಿತದೊಂದಿಗೆ 44,729 ಮಟ್ಟಕ್ಕೆ ಇಳಿದಿದೆ.
ಇಂದಿನ ಪ್ರಚಂಡ ಕುಸಿತದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವನ್ನ ಅನುಭವಿಸಿದ್ದಾರೆ ಮತ್ತು ಅವರ ಬಂಡವಾಳವು 5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಕುಸಿದಿದೆ. ನಿನ್ನೆಯ ಮಾರುಕಟ್ಟೆ ಬಂಡವಾಳ 306.80 ಲಕ್ಷ ಕೋಟಿ ರೂ.ಗಳಾಗಿದ್ದು, ಇಂದು 301.69 ಲಕ್ಷ ಕೋಟಿ ರೂ.ಗೆ ಇಳಿದಿದೆ.