ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್ : ಕೋರ್ಟ್ ಆದೇಶ

ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್ : ಕೋರ್ಟ್ ಆದೇಶ

ಸಾಂಗ್ಲಿ: ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿರುವ ಕೋರ್ಟ್ ಜೂ.8ರೊಳಗೆ ಕೋರ್ಟ್ಗೆ ಹಾಜರುಪಡಿಸಲು ಆದೇಶಿಸಿದೆ. ಹೌದು ಸಾಂಗ್ಲಿ ಜಿಲ್ಲೆಯ ಕೋರ್ಟ್ ಸುಮಾರು 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ವಾರಂಟ್ ಜಾರಿ ಮಾಡಿ, ಆದೇಶ ಹೊರಡಿಸಿದೆ. ಹಾಗೇ, ರಾಜ್ ಠಾಕ್ರೆಯವರನ್ನು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸುವಂತೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂಬೈ ಪೊಲೀಸರಿಗೆ ಸೂಚಿಸಿದ್ದಾರೆ. 

 

2008ರಲ್ಲಿ ರಾಜ್ ಠಾಕ್ರೆ ಅವರೊಂದು ಪ್ರಚೋದನಕಾರಿ ಭಾಷಣ ಮಾಡಿದ್ದರ ವಿರುದ್ಧ ಕೇಸ್ ದಾಖಲಾಗಿದೆ. ಈಗ ರಾಜ್ ಠಾಕ್ರೆ ಮತ್ತು ಎಂಎನ್ ಎಸ್ ನ ಇನ್ನೊಬ್ಬ ನಾಯಕ ಶಿರೀಶ್ ಪರ್ಕರ್ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ. ಏಪ್ರಿಲ್ 6ರಂದೇ ಕೋರ್ಟ್ ಈ ಆದೇಶ ಕೊಟ್ಟಿದ್ದರೂ, ಪೊಲೀಸರು ರಾಜ್ ಠಾಕ್ರೆಯವರನ್ನು ನ್ಯಾಯಾಲಯದ ಎದುರು ಕರೆತರಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ. ಜೂ.8ರೊಳಗೆ ಅವರಿಬ್ಬರನ್ನೂ ಕೋರ್ಟ್ಗೆ ಕರೆತರಬೇಕು ಎಂದು ಕೋರ್ಟ್ ಹೇಳಿದೆ. ಇತ್ತೀಚೆಗೆ ಕೂಡ ರಾಜ್ ಠಾಕ್ರೆ ಹನುಮಾನ್ ಚಾಲೀಸಾ-ಆಜಾನ್ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದರು.