ನವಲಗುಂದ ಬ್ರೇಕಿಂಗ್: ಅತಿಯಾದ ವೇಗದಿಂದ ಹೊಲಕ್ಕೆ ನುಗ್ಗಿ ಪಲ್ಟಿಯಾದ ಬಸ್

ನವಲಗುಂದ ಬ್ರೇಕಿಂಗ್: ಅತಿಯಾದ ವೇಗದಿಂದ ಹೊಲಕ್ಕೆ ನುಗ್ಗಿ ಪಲ್ಟಿಯಾದ ಬಸ್

ನವಲಗುಂದ : ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬೆಣ್ಣಿ ಹಳ್ಳದ ಸೇತುವೆ ಬಳಿ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುವ ಬಸ್ಸೊಂದು ಅತಿಯಾದ ವೇಗದಿಂದ ಹೊಲಕ್ಕೆ ನುಗ್ಗಿದ ಘಟನೆ ಬುಧವಾರ ಸಂಜೆ ನಡೆದಿದೆ. ಹೌದು ಬಾಗಲಕೋಟೆ ಡಿಪೋಗೆ ಸಂಬಂಧ ಪಟ್ಟ KA 29 F 1171 ನಂಬರಿನ ಬಸ್ ನರಗುಂದ ರಸ್ತೆಯಲ್ಲಿರುವ ಬೆಣ್ಣೆ ಹಳ್ಳದ ಸಮೀಪ ಹೊಲಕ್ಕೆ ನುಗ್ಗಿ, ಪಲ್ಟಿಯಾಗಿದೆ. ಚಾಲಕನ ಅತಿಯಾದ ವೇಗವೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಬಸ್‌ನಲ್ಲಿರುವ ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕರು ಗಾಯಗೊಂಡಿದ್ದು, ಸ್ಥಳೀಯ ನವಲಗುಂದ ತಾಲೂಕ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ನವಲಗುಂದ ಪೊಲೀಸ್ ಠಾಣೆಯ ಪಿಎಸ್ಐ ಕಲ್ಮೇಶ್ ಬೆನ್ನೂರ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.