ಬ್ರೆಜಿಲ್ ಅಧ್ಯಕ್ಷರಿಗೆ ಕೊರೊನಾ ವ್ಯಾಕ್ಸಿನ್ ಬೇಡ್ವಂತೆ

ಬ್ರೆಜಿಲ್ ಅಧ್ಯಕ್ಷರಿಗೆ ಕೊರೊನಾ ವ್ಯಾಕ್ಸಿನ್ ಬೇಡ್ವಂತೆ

ಬ್ರೆಜಿಲ್ ಅಧ್ಯಕ್ಷ ಬೋಲ್ಸೋನಾರೋ ಅವರು ತಾವು ಯಾವುದೇ ಕಾರಣಕ್ಕೂ ಕೊರೊನಾ ಲಸಿಕೆ ತೆಗೆದುಕೊಳ್ಳಲ್ಲ ಎಂದು ಘೋಷಿಸಿದ್ದಾರೆ‌. ಇದಕ್ಕೂ ಮುನ್ನ ಅವರು ' ನಾನು ಲಸಿಕೆ ಪಡೆದರೆ ಕೊನೆಯ ಬ್ರೆಜಿಲಿಗನಾಗಿ ಪಡೆಯುತ್ತೇನೆ ಎಂದಿದ್ದರು. ಈ ಹೇಳಿಕೆಯಿಂದ ಬ್ರೆಜಿಲ್ ಜನ ಆಕ್ರೋಶಿತರಾಗಿದ್ದಾರೆ. ಹಾಗೂ ಬೋಲ್ಸೋನಾರೋ ಅವರನ್ನು ಜನ ಕೆಲವೆಡೆ ಅವಮಾನ ಮಾಡಿದ್ದಾರೆ. ಇತ್ತೀಚೆಗೆ ಅವರು ಅಮೆರಿಕಕ್ಕೆ ಹೋದಾಗ ಪ್ರವೇಶ ನಿರಾಕರಿಸಲಾಗಿತ್ತು. ಹೀಗಾಗಿ ನ್ಯೂಯಾರ್ಕ್ ನಗರದ ಹೊಟೇಲೊಂದರ ಎದುರು ಬೀದಿಯಲ್ಲಿ ನಿಂತು ಅವರು ಪಿಜ್ಜಾ ತಿಂದಿದ್ದರು‌. ಲಸಿಕೆ ವಿರೋಧಿ ಹೇಳಿಕೆ ನೀಡಿದ್ದರಿಂದ ಅವರು ಸಾರ್ವಜನಿಕವಾಗಿ ಈ ರೀತಿ ಮುಜುಗರ ಅನುಭವಿಸುತ್ತಿದ್ದಾರೆ.