ಕೃಷಿ ಉಡಾನ್ ಸೌಲಭ್ಯಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆ

ಕೃಷಿ ಉಡಾನ್ ಸೌಲಭ್ಯಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆ

ಹುಬ್ಬಳ್ಳಿ:ಕೃಷಿ ಉಡಾನ್ ಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣವೂ ಆಯ್ಕೆ ಆಗಿದೆ.ಹೌದು. ರೈತರ ಉತ್ಪನ್ನಗಳನ್ನ ತ್ವರಿತಗತಿಯಲ್ಲಿಯೇ ದೇಶ ಮತ್ತು ವಿದೇಶಗಳಿಗೆ ಸಾಗಿಸಲು ಕೇಂದ್ರ ಸರ್ಕಾರ ದೇಶದ 53 ವಿಮಾನ ನಿಲ್ದಾಣಗಳಲ್ಲಿ ಕೃಷಿ ಉಡಾನ್ ಸೌಲಭ್ಯ ಆರಂಭಿಸುತ್ತಿದೆ.ಇದರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವೂ ಆಯ್ಕೆ ಆಗಿರೋದು ವಿಶೇಷ. ಹುಬ್ಬಳ್ಳಿಯ ವಿಮಾನ ನಿಲ್ದಾಣ ಕೃಷಿ ಉಡಾನ್ ಗೆ ಆಯ್ಕೆ ಆಗಿರೋದ್ರಿಂದ ಇಲ್ಲಿಯ ಪುಷ್ಪೋದ್ಯಮ ಹಾಗೂ ತೋಟಗಾರಿಕೆಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಕಾಣಬಹುದಾಗಿದೆ. ಇದು ಒಂದು ವಿಷಯವಾದರೆ, ಇಷ್ಟು ದಿನ ಸಾಂಕೇತಿಕವಾಗಿಯೇ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ವ್ಯವಸ್ಥೆ ಇತ್ತು. ಬುಧವಾರ ಅಧಿಕೃತವಾಗಿಯೇ ಈ ಕಾರ್ಯಾಚರಣೆಗೆ ಚಾಲನೆ ಸಿಕ್ಕಿದೆ. ಇದರಿಂದ ತ್ವರಿತವಾಗಿ ಕೋರಿಯರ್,ತುರ್ತು ಅಗತ್ಯ ಸಾಮಗ್ರಿಗಳು,ಇ ಕಾಮರ್ಸ್ ಕಂಪನಿಗಳು ಸೇರಿದಂತೆ ಇತರ ಉದ್ಯಮಗಳಿಗೆ ಅನುಕೂಲವಾಗಲಿದೆ.