ಫೆ.14ರಿಂದ 22ರ ತನಕ ವಿಧಾನಸೌಧದ ಸುತ್ತ ಸೆಕ್ಷನ್ 144 ಜಾರಿ

ಬೆಂಗಳೂರು: ಬಜೆಟ್ ವಿಧಾನಸಭಾ ಅಧಿವೇಶನ ಪ್ರಾರಂಭವಾಗುವ ಹಿನ್ನಲೆಯಲ್ಲಿ, ಫೆ.14ರಿಂದ 22ರ ತನಕ ವಿಧಾನಸೌಧದ 2 ಕಿ.ಮೀ ಸುತ್ತ ಮುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೋಲಿಸ್ ಆಯ್ತುಕ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದಾರೆ. ಈ ವೇಳೇಯಲ್ಲಿ ನಿಗದಿ ಪ್ರದೇಶದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ರ್ಯಾಲಿ ಸೇರಿದಂತೆ ನಾಲ್ಕು ಮಂದಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ.