ತಮಿಳುನಾಡಿನಲ್ಲಿ ಮತ್ತೆ ಮಳೆ ಆತಂಕ: ಆರೆಂಜ್ ಅಲರ್ಟ್ ಘೋಷಣೆ

ಚೆನ್ನೈ: ನಿರಂತರವಾಗಿ ಸುರಿದ ಮಹಾಮಳೆಗೆ ತಮಿಳು ನಾಡು ಜನತೆ ತತ್ತರಿಸಿ ಹೋಗಿದ್ದಾರೆ. ಜನ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಮಳೆ ಭೀತಿ ಸೃಷ್ಟಿಯಾಗಿದೆ. ನವೆಂಬರ್ 17ರಿಂದ 19ರವರೆಗೆ ಚೆನ್ನೈ ಹಾಗೂ ನೆರೆಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂಬ ಮಾಹಿತಿ ಇದೆ. ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್ ಪಟ್ಟು, ರಾಣಿಪೇಟೆ, ವೆಲ್ಲೂರು, ವಿಲ್ಲೂಪುರಂ, ತಿರುವಣ್ಣಮಲೈ, ಕಾಲಕುರಿಚಿ, ಕಡಲೂರು ಮತ್ತಿತರ ಜಿಲ್ಲೆಗಳಲ್ಲಿ 12 ರಿಂದ 20 ಸೆಂಟಿ ಮೀಟರ್ ಮಳೆಯಾಗುವ ಸಾಧ್ಯತೆಯಿದ್ದು, ಪ್ರಾದೇಶಿಕ ಹವಾಮಾನ ಕೇಂದ್ರ ಆರೆಂಜ್ ಅಲರ್ಟ್ ಹೊರಡಿಸಿದೆ.