ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಆದಿ ಜ್ಯೋತಿರ್ಲಿಂಗಕ್ಕೆ ಪೂಜೆ ಸಲ್ಲಿಸಿದರು.
ಪ್ರಮುಖವಾಗಿ, ಪ್ರಧಾನಿ ಮೋದಿ ಅವರು ದೇವಾಲಯದ ಟ್ರಸ್ಟ್‌ನ ಅಧ್ಯಕ್ಷರೂ ಆಗಿದ್ದಾರೆ. ಅವರು ಸೌರಾಷ್ಟ್ರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಮತ್ತು ವೆರಾವಲ್, ಧೋರಾಜಿ, ಅಮ್ರೇಲಿ ಮತ್ತು ಬೊಟಾಡ್‌ನಲ್ಲಿ ಚುನಾವಣೆ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೋಮವಾರ ಅವರು ಸುರೇಂದ್ರನಗರ, ಭರೂಚ್ ಮತ್ತು ನವಸಾರಿಯಲ್ಲಿ ಚುನಾವಣಾ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.