ಚಂದ್ರಯಾನ-3 ಉಡಾವಣೆಗೆ ಸಿದ್ಧತೆ- ಇದು ದೇಶೀ ನಿರ್ಮಿತ ರಾಕೆಟ್

ಚಂದ್ರಯಾನ-3 ಉಡಾವಣೆಗೆ ಸಿದ್ಧತೆ- ಇದು ದೇಶೀ ನಿರ್ಮಿತ ರಾಕೆಟ್

ಶ್ರೀಹರಿಕೋಟಾ: ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆಯ ರಾಕೆಟ್ ಉಡಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ 25.30 ನಿಮಿಷಗಳ ಕೌಂಟ್ ಡೌನ್ ಆರಂಭವಾಗಲಿದೆ. 

ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಚಂದ್ರಯಾನ-3. ಈ ಯೋಜಗೆ ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಕೌಂಟ್ ಡೌನ್ ಆರಂಭವಾಗಿದೆ. ಚಂದ್ರಯಾನ-3ಗೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತಾ ಪರಿಶೀಲನೆಯನ್ನು ಇಸ್ರೋ ಮುಗಿಸಿದ್ದು, ಉಡ್ಡಯನಕ್ಕೆ ಅನುಮತಿ ನೀಡಿದೆ. 

ಇಂದು ಶುಕ್ರವಾರದ ಮಧ್ಯಾಹ್ನ 2 ಗಂಟೆ 35 ನಿಮಿಷ 17 ಸೆಕೆಂಟ್ ಗೆ ಚಂದ್ರಯಾನ ನೌಕೆಯನ್ನು ಹೊತ್ತ ರಾಕೆಟ್ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. 

ಈ ಉಡಾವಣೆಯನ್ನು ದೇಶೀಯವಾಗಿ ನಿರ್ಮಾಣ ಮಾಡಲಾದ ಲಾಂಚಿಂಗ್ ವಾಹನವನ್ನು ಬಳಸಲಾಗುತ್ತಿದೆ. ಲ್ಯಾಂಡರ್ ಮತ್ತು ರೂವರ್‌ಗಳನ್ನು ಸಹ ದೇಶಿಯವಾಗಿ ತಯಾರಿಸಲಾಗಿದೆ. ಲ್ಯಾಂಡರ್ ಆಗಸ್ಟ್ ನಲ್ಲಿ ಚಂದ್ರನ ಮೇಲೆ ಇಳಿಯಲಿದೆ. ಈ ಎಲ್ಲವನ್ನು ನೀವು ಇಸ್ರೋ ಯೂಟ್ಯೂಬ್ ಚಾನಲ್‌ನಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ.