ಕೆಜಿಎಫ್ ತಾತ ಕೃಷ್ಣ ಜಿ ರಾವ್ ನಿಧನ

ಕೆಜಿಎಫ್ ತಾತ ಕೃಷ್ಣ ಜಿ ರಾವ್ ನಿಧನ

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಖ್ಯಾತಿಯ ತಾತ ಹಿರಿಯ ನಟ ಕೃಷ್ಣ ಜಿ ರಾವ್ ಮೃತಪಟ್ಟಿದ್ದಾರೆ. 

ಕೃಷ್ಣ ಜಿ ರಾವ್ ಅವರು ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಜೊತೆ ನಟಿಸಿ ದೊಡ್ಡ ಹೆಸರು ಮಾಡಿದ್ದರು. ಇವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.