ಭೂಕಂಪ ಪೀಡಿತ ಜಪಾನ್‌ನಿಂದ ಭಾರತಕ್ಕೆ ಬಂದ ಜೂನಿಯರ್ ಎನ್‌ಟಿಆರ್

ಹೈದರಾಬಾದ್: ಪ್ರಬಲ ಭೂಕಂಪನದಿಂದ ನಲುಗಿರುವ ಜಪಾನ್‌ನಿಂದ ವಾಪಸ್ ಭಾರತಕ್ಕೆ ಬಂದಿರುವ ನಟ ಜ್ಯೂನಿಯರ್ ಎನ್‌ಟಿಆರ್ ಸುರಕ್ಷಿತವಾಗಿ ತಲುಪಿದ್ದಾರೆ. ಸರಣಿ ಭೂಕಂಪನದಿಂದ ನಲುಗಿರುವ ಜಪಾನ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ತಮ್ಮ ಸಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಜಪಾನ್‌ನಿಂದ ಇಂದು ಮನೆಗೆ ಹಿಂದಿರುಗಿದ್ದೇನೆ. ಅಲ್ಲಿ ಭೂಕಂಪ ಸಂಭವಿಸುವುದರಿಂದ ಬಹಳ ಆಘಾತಕ್ಕೊಳಗಾಗಿದ್ದೇನೆ. ಕಳೆದ ಒಂದು ವಾರ ಪೂರ್ತಿ ಅಲ್ಲಿಯೇ ಕಳೆದಿದ್ದೆ. ಭೂಕಂಪನದಿಂದ ಸಂಕಷ್ಟಕ್ಕೀಡಾಗಿರುವ ಪ್ರತಿಯೊಬ್ಬರಿಗೂ ನನ್ನ ಹೃದಯ ಮಿಡಿಯುತ್ತಿದೆ. ಅಲ್ಲಿನ ಜನರ ಔದಾರ್ಯಕ್ಕೆ ಕೃತಜ್ಞನಾಗಿದ್ದೇನೆ. ಜಪಾನ್ ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಜ್ಯೂನಿಯರ್ ಎನ್‌ಟಿಆರ್ ಬರೆದುಕೊಂಡಿದ್ದಾರೆ.