ಸೇನಾ ಗೌರವಕ್ಕೆ ಪಾತ್ರರಾದ ನೀರಜ್ – ಒಲಿಂಪಿಕ್ ತಾರೆಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ

ಸೇನಾ ಗೌರವಕ್ಕೆ ಪಾತ್ರರಾದ ನೀರಜ್ – ಒಲಿಂಪಿಕ್ ತಾರೆಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಜಾವೆಲಿನ್ ಎಸೆತದ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದೆ. 2016ರಲ್ಲಿ ನೈಬ್ ಸುಬೇದಾರ್ ಆಗಿ ಸೇನೆಗೆ ಸೇರಿದ್ದ ಅವರು, ಈ ಪದವಿಗೆ ಉತ್ತೀರ್ಣರಾಗಿದ್ದು, ಇದೊಂದು ಗೌರವದ ಕ್ಷಣವಾಗಿದೆ. 

ಆಗಸ್ಟ್ 26, 2016 ರಂದು ಭಾರತೀಯ ಸೇನೆಯಲ್ಲಿ ನೈಬ್ ಸುಬೇದಾರ್ ಹುದ್ದೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿ ನೀರಜ್‌ ಕಾರ್ಯವನ್ನು ಆರಂಭಿಸಿದ್ರು. ಇವರಿಗೆ ಎರಡು ವರ್ಷಗಳ ಬಳಿಕ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ಮೇ 23ರಂದು ಪೋಲೆಂಡ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಅವರು ಜರ್ಮನಿಯ ಜೂಲಿಯನ್ ವೆಬರ್ ಹಾಗೂ ಗ್ರೆನಡಾದ ಆಂಡರ್ಸನ್ ಪೀಟರ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. 

ಈ ಹಿಂದೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಹಾಗೂ ಪ್ಯಾರಿಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ನೀರಜ್, ಈಗ 90 ಮೀಟರ್ ಎಸೆತ ಗುರಿ ಹೊಂದಿದ್ದು ಭರ್ಜರಿ ಫಾರ್ಮ್‌ನಲ್ಲಿ ಮುಂದಾಗುತ್ತಿದ್ದಾರೆ.