ಚಿತ್ರದುರ್ಗ : ರೇಣುಕಾ ಸ್ವಾಮಿ ಮನೆಗೆ ಭೇಟಿ ನೀಡಿದ ಹೋಂ ಮಿನಿಸ್ಟರ್ ಡಾ.ಪರಮೇಶ್ವರ್

ಚಿತ್ರದುರ್ಗ : ರೇಣುಕಾ ಸ್ವಾಮಿ ಮನೆಗೆ ಭೇಟಿ ನೀಡಿದ ಹೋಂ ಮಿನಿಸ್ಟರ್ ಡಾ.ಪರಮೇಶ್ವರ್

ಚಿತ್ರದುರ್ಗ: ನಟ ದರ್ಶನ ಆ್ಯಂಡ್‌ ಗ್ಯಾಂಗ್ ನಿಂದ ಭೀಕರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಮನೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ‌. ರೇಣುಕಾ ಸ್ವಾಮಿಯ ಹತ್ಯೆ ಪ್ರಕರಣ ಕುರುತು ಮತ್ತಷ್ಟು ಮಾಹಿತಿ ಪಡೆದಿದ್ದಾರೆ. 

ಈ ವೇಳೆ ಹತ್ಯೆ ಕುರಿತು ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ ತಾಯಿ ನ್ಯಾಯಕ್ಕಾಗಿ ಸಚಿವರಲ್ಲಿ ಮನವಿ ಮಾಡಿದ್ದಾರೆ‌. ಈ ವೇಳೆ ರೇಣುಕಾ ಸ್ವಾಮಿ ತಂದೆ ತಾಯಿಗಳಿಗೆ ಸಮಾಧಾನ ಹೇಳಿದ ಗೃಹ ಸಚಿವ ಡಾ ಜಿ .ಪರಮೇಶ್ವರ್ ಸೂಕ್ತ ತನಿಖೆ ಮಾಡಿಸುವ ಭರವಸೆ ನೀಡಿದ್ದಾರೆ. 

ಈ ವೇಳೆ ರೇಣುಕಸ್ವಾಮಿ ಪತ್ನಿಗೆ ಉದ್ಯೋಗ ನೀಡುವಂತೆ, ಸೂಕ್ತ ತನಿಖೆ ಮಾಡಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಗೆ ಸಚಿವ ಡಿ.ಸುಧಾಕರ್, ಸ್ಥಳಿಯ ಶಾಸಕರಾದ ಕೆಸಿ ವೀರೇಂದ್ರ, ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್ ಆಂಜನೇಯ ಸಾಥ್ ನೀಡಿದ್ದಾರೆ‌.