ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಧಾರವಾಡ ಜಿಲ್ಲಾಡಳಿತದ ಅಧಿಕಾರಿಗಳು ಭಾಗಿ : 3 ಅರ್ಜಿ ಸ್ವೀಕಾರ

ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಧಾರವಾಡ ಜಿಲ್ಲಾಡಳಿತದ ಅಧಿಕಾರಿಗಳು ಭಾಗಿ : 3 ಅರ್ಜಿ ಸ್ವೀಕಾರ

ಧಾರವಾಡ : ವಿಧಾನಸೌಧದ ಮುಂಭಾಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಮಟ್ಟದ ಜನತಾ ದರ್ಶನದ 2ನೇ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿದ್ದರು. 

 

ಸಾರ್ವಜನಿಕರಿಂದ ಬರುವ ಅಹವಾಲುಗಳು, ದೂರುಗಳು ಮತ್ತು ಮನವಿ ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆನ್ ಲೈನ್ ವೀಡಿಯೋ ಸಂವಾದದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಸಾಥ್ ನೀಡಿ ಜನರ ಅಹವಾಲು ವಿಲೇವಾರಿ ಪ್ರಕ್ರಿಯೆ ಕೆಲಸವನ್ನು ಮಾಡಿದರು. 

 

ಅದರ ಭಾಗವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ವೀಡಿಯೋ ಸಂವಾದದ ಮೂಲಕ ಜನತಾ ದರ್ಶನದಲ್ಲಿ ಭಾಗವಹಿಸಿ ಜಿಲ್ಲೆಗೆ ಸಂಬಂಧಿಸಿದ ಅರ್ಜಿಗಳ ವಿಲೆವಾರಿಗೆ ಕ್ರಮವಹಿಸಿದರು. 

 

ಧಾರವಾಡ ಜಿಲ್ಲೆಗೆ ಸಂಬಂಧಪಟ್ಟಂತೆ ಸಂಜೆಯವರೆಗೆ ಒಟ್ಟು 3 ಅರ್ಜಿಗಳು ಸ್ವೀಕಾರ ಮಾಡಲಾಗಿದೆ. ಮೂರು ಅರ್ಜಿಗಳ ಪೈಕಿ ಒಂದು ಅಣ್ಣಿಗೇರಿಯಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅನ್ನಭಾಗ್ಯ ಯೋಜನೆಗೆ ಸಂಭಂದಿಸಿದ ಮತ್ತು ಕುಂದಗೋಳ ತಾಲೂಕಿನಿಂದ ಕಂದಾಯ ಇಲಾಖೆಗೆ ಸಂಬಂದಿಸಿದ ಎರಡು ಅರ್ಜಿಗಳು ಸೇರಿದಂತೆ ಒಟ್ಟು 3 ಅರ್ಜಿಗಳನ್ನು ಸ್ವೀಕರಿಸಿ ವಿಲೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 

ಮುಖ್ಯಮಂತ್ರಿಗಳ ಕಚೇರಿಯ ಜನಸ್ಪಂದನ ಕಚೇರಿಯಿಂದ ಇಂದಿನ ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳ ಪೂರ್ಣ ಪರಿಶೀಲನೆ ನಂತರ, ಆನ್ ಲೈನ್ ಅಪಡೆಟ್ ನಾಳೆಗೆ ಮಾಡಲಾಗುತ್ತದೆ. ಆ ನಂತರವೂ ಜಿಲ್ಲೆಗೆ ಸಂಬಂಧಿಸಿದ ಅಹವಾಲುಗಳು ಬರಬಹುದಾಗಿದ್ದು, ಅವುಗಳ ವಿಲೇವಾರಿಗೆ ಅಗತ್ಯ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.