ಮಹತ್ವದ 2 ಶೃಂಗಸಭೆಗಳಿಗಾಗಿ ಇಟಲಿ, ಯುಕೆಗೆ ಪ್ರಧಾನಿ ಮೋದಿ ಪ್ರಯಾಣ

ಮಹತ್ವದ 2 ಶೃಂಗಸಭೆಗಳಿಗಾಗಿ ಇಟಲಿ, ಯುಕೆಗೆ ಪ್ರಧಾನಿ ಮೋದಿ ಪ್ರಯಾಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಶೃಂಗಸಭೆ ರೋಮ್ ಮತ್ತು 26ನೇ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶ ಅಥವಾ COP26 ಗ್ಲಾಸ್ಗೊದಲ್ಲಿ ಕ್ರಮವಾಗಿ ಎರಡು ಮಹತ್ವದ ಶೃಂಗಸಭೆಗಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅಕ್ಟೋಬರ್ 28ರಂದು ರೋಮ್‌ಗೆ ತೆರಳಲಿದ್ದಾರೆ ಮತ್ತು ಅಕ್ಟೋಬರ್ 30 ಮತ್ತು 31ರಂದು ನಡೆಯುವ 16ನೇ G20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 20 ಅತ್ಯಂತ ಶಕ್ತಿಶಾಲಿ ಆರ್ಥಿಕತೆಗಳ ವಾರ್ಷಿಕ ಸಭೆಯ ಬದಿಯಲ್ಲಿ ಹಲವಾರು ದ್ವಿಪಕ್ಷೀಯ ಸಂವಾದಗಳನ್ನು ಆಯೋಜಿಸಲಾಗಿದೆ.