ಮುಂಬೈ ಕರ್ನಾಟಕ’ ಇನ್ಮುಂದೆ ‘ಕಿತ್ತೂರು ಕರ್ನಾಟಕ’ : ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಮುಂಬೈ ಕರ್ನಾಟಕ’ ಇನ್ಮುಂದೆ ‘ಕಿತ್ತೂರು ಕರ್ನಾಟಕ’ : ಸಂಪುಟ ಸಭೆಯಲ್ಲಿ  ಮಹತ್ವದ ನಿರ್ಧಾರ

ಬೆಳಗಾವಿ: ಹೈದರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಮಾದರಿಯಲ್ಲಿಯೇ ಮುಂಬೈ-ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕವೆಂದು ಮರುನಾಮಕರಣ ಮಾಡಲಾಗಿದೆ. ಈ ಕುರಿತು ನಿನ್ನೆ (ಸೋಮವಾರ) ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ, ಧಾರವಾಡ , ವಿಜಯಪುರ ,ಬಾಗಲಕೋಟೆ ,ಗದಗ ,ಉತ್ತರ ಕನ್ನಡ, ಹಾವೇರಿ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಮುಂಬೈ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಕೆಯಾದಂತಾಗಿದೆ. ‘ಮುಂಬೈ ಕರ್ನಾಟಕ’ ಎನ್ನುವುದು ದಾಸ್ಯದ ಸಂಕೇತವಾಗಿದೆ. ಅದರಿಂದ ಮುಕ್ತಿ ಕೊಟ್ಟು ನಮ್ಮ ಅಸ್ಮಿತೆ ಪೋಷಿಸಬೇಕು ಎನ್ನುವ ಬಹು ವರ್ಷಗಳ ಬೇಡಿಕೆಗೆ ಈ ಭಾಗದವರೇ ಆದ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಇದು ಸಂತಸಕ್ಕೆ ಕಾರಣವಾಗಿದೆ.