ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಎಸ್ ಧೋನಿ ಗುಡ್ ಬೈ ಹೇಳಿದ ಬೆನ್ನಲ್ಲೇ ಸುರೇಶ್ ರೈನಾ ಕೂಡ ವಿದಾಯ

ಮುಂಬೈ : ನೆಚ್ಚಿನ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು.
ಧೋನಿ ಜತೆಗೂಡಿ ಚೆನ್ನೈನಲ್ಲಿ ಐಪಿಎಲ್ ಸಿದ್ಧತೆ ಆಗಮಿಸಿದ್ದ ರೈನಾ, ದಿಢೀರ್ ವಿದಾಯ ಹೇಳಿದ್ದಾರೆ.
33 ವರ್ಷದ ಸುರೇಶ್ ರೈನಾ ಕಳೆದ 2 ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.
ಧೋನಿ ಸಾರಥ್ಯದ ಸಿಎಸ್ ಕೆ ತಂಡದ ಪ್ರಮುಖ ಆಟಗಾರನಾಗಿರುವ ರೈನಾ, ನಾನು ನಿಮ್ಮ ಜತೆಯಲ್ಲೇ ಸಾಗಲು ಇಷ್ಟಪಡುವೆ ಧೋನಿ ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಜತೆಗೆ ಐಪಿಎಲ್ ಆರಂಭದಿಂದಲೂ ಧೋನಿ ಜತೆಯಲ್ಲೇ ಸಿಎಸ್ ಕೆ ತಂಡದಲ್ಲಿದ್ದಾರೆ.
ಉತ್ತರ ಪ್ರದೇಶದ ಸುರೇಶ್ ರೈನಾ, 18 ಟೆಸ್ಟ್ ಪಂದ್ಯಗಳಿಂದ 768 ರನ್ ಕಲೆಹಾಕಿದ್ದರೆ, 226 ಏಕದಿನ ಪಂದ್ಯಗಳಿಂದ 5 ಶತಕ ಸೇರಿದಂತೆ 5615ರನ್, 78 ಟಿ20 ಪಂದ್ಯಗಳಿಂದ 1 ಶತಕ, 5 ಅರ್ಧಶತಕ 1605 ರನ್ ಬಾರಿಸಿದ್ದಾರೆ.