ಶಾರುಖ್ ಖಾನ್ ಪುತ್ರ ಆರ್ಯನ್​ ತನಿಖೆ ಮತ್ತಷ್ಟು ಚುರುಕು

ಶಾರುಖ್ ಖಾನ್ ಪುತ್ರ ಆರ್ಯನ್​ ತನಿಖೆ ಮತ್ತಷ್ಟು ಚುರುಕು

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಕೇಸ್​ನಲ್ಲಿ ಅರೆಸ್ಟ್ ಆಗಿರುವ ಆರೋಪಿಗಳಿಗೆ ಮುಂಬೈನ ಕಿಲ್ಲಾ ಕೋರ್ಟ್​​ ಬೇಲ್ ತಿರಸ್ಕರಿಸಿದ ಬೆನ್ನಲ್ಲೇ, ನಟ ಶಾರುಖ್ ಖಾನ್ ಪುತ್ರ ಆರ್ಯನ್ ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ. ಆರ್ಯನ್ ಖಾನ್ ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ಎನ್‌ಸಿಬಿ ಅಧಿಕಾರಿಗಳ ವಶದಲ್ಲಿರುವ ಆರ್ಯನ್, ಸತತ ವಿಚಾರಣೆಗೊಳಪಟ್ಟಿದ್ದಾರೆ. ಈ ಮಧ್ಯೆ ಅವರು ಎನ್‌ಸಿಬಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ತಾನು 4 ವರ್ಷಗಳಿಂದ ಡ್ರಗ್ ಸೇವನೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಕೆಲ ವಾಹಿನಿಗಳು ವರದಿ ಮಾಡಿವೆ. ಆದರೆ ಎನ್‌ಸಿಬಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆರ್ಯನ್ ವಾಟ್ಸಾಪ್ ಚಾಟ್​ನಲ್ಲಿ ಸಿಕ್ಕ ಮಾಹಿತಿ ಎನ್‌ಸಿಬಿ​ ಬೆಚ್ಚಿ ಬೀಳಿಸಿದ್ದು, ನಶೆ ನಂಟು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಸೆದುಕೊಂಡಿದೆ. ಇದರ ನಡುವೆ ಕೋರ್ಟ್​​ ಆರ್ಯನ್ ಖಾನ್ ಹಾಗೂ ಆತನ ಸ್ನೇಹಿತರನ್ನು ಅಕ್ಟೋಬರ್​ 7ರ ತನಕ ಮಾತ್ರ ಕಸ್ಟಡಿಗೆ ನೀಡಿರುವುದರಿಂದ, ಅಧಿಕಾರಿಗಳು ತಮ್ಮ ತನಿಖೆಯ ವೇಗವನ್ನು ಹೆಚ್ಚಿಸಿದ್ದಾರೆ.