ಬೆಳಗಾವಿ : ವಿಧಾನ ಪರಿಷತ್ ಸಭಾಪತಿಯಾಗಿ ಹೊರಟ್ಟಿ ಆಯ್ಕೆ

ಬೆಳಗಾವಿ : ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಹಿರಿಯ ರಾಜಕಾರಣಿ ಬಿಜೆಪಿ ಸದಸ್ಯ ಬಸವರಾಜ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರು ಹೊರಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಈ ಮೂಲಕ ಹೊರಟ್ಟಿ ಅವರು 3ನೇ ಬಾರಿಗೆ ಸಭಾಪತಿ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಸಭಾಪತಿಯಾಗಿ ಹೊರಟ್ಟಿ ಚುನಾಯಿಸುವಂತೆ ತೇಜಸ್ವಿನಿಗೌಡ, ಶಾಂತಾರಾಂ ಸಿದ್ದಿ, ವೈ.ಎ.ನಾರಾಯಣಸ್ವಾಮಿ, ದೇವೇಗೌಡರಿಂದ ಪ್ರಸ್ತಾವ ಸೂಚಿಸಿದ್ರು.
ಪ್ರಸ್ತಾವಕ್ಕೆ ಅನುಮೋದಿಸಿದ ಆಯನೂರು ಮಂಜುನಾಥ್, ಆರ್.ಶಂಕರ್ ಹಾಗೂ ಎಸ್.ವಿ.ಸಂಕನೂರು, ಪ್ರದೀಪ್ ಶೆಟ್ಟರ್ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ ಮಾಡಿದ್ದಾರೆ.