ಕುಂದಗೋಳ: ರೈತರಿಗೆ ಸಹಾಯಧನದಲ್ಲಿ ಹಲವು ಸೌಲಭ್ಯ ! ಇಲಾಖೆಗೆ ಭೇಟಿ ಕೊಡಿ

ಕುಂದಗೋಳ: ರೈತರಿಗೆ ಸಹಾಯಧನದಲ್ಲಿ ಹಲವು ಸೌಲಭ್ಯ ! ಇಲಾಖೆಗೆ ಭೇಟಿ ಕೊಡಿ

ಕುಂದಗೋಳ: 2024-25 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆಗೆ ಜುಲೈ 15 ಕೊನೆಯ ದಿನವಾಗಿದೆ. 

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ (ಬಾಳೆ, ತರಕಾರಿ, ಬಿಡಿ ಹೂ, ಮತ್ತು ಗೋಡಂಬಿ), ಮಾವು ಪುನಃಶ್ಚೇತನ, ವೈಯಕ್ತಿಕ ಮತ್ತು ಸಮುದಾಯ ನೀರು ಸಂಗ್ರಹಣಾ ಘಟಕ, 20 ಪಿಟಿಒ ಎಚ್.ಪಿ ಸಾಮರ್ಥ್ಯದವರೆಗಿನ ಟ್ರ್ಯಾಕ್ಟರ್, ಪ್ಯಾಕ್‌ ಹೌಸ್‌, ಈರುಳ್ಳಿ ಸಂಗ್ರಹಣಾ ಘಟಕ, ತಳ್ಳುವ ಗಾಡಿ ಘಟಕಗಳಿಗೆ ಸಹಾಯಧನ ಲಭ್ಯವಿರುತ್ತದೆ. 

ಕೃಷಿ ಯಾಂತ್ರೀಕರಣ ಅಭಿಯಾನದಡಿ ಸಣ್ಣ, ಅತೀ ಸಣ್ಣ ಮತ್ತು ರೈತ ಮಹಿಳೆಯರಿಗೆ ಶೇ.50%ರಷ್ಟು ಮತ್ತು ದೊಡ್ಡ ರೈತರಿಗೆ ಶೇ.40% ರಷ್ಟು ಸಹಾಯಧನ ನೀಡಲಾಗುವುದು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಗರಿಷ್ಠ 2 ಹೆಕ್ಟೇರ್‌'ವರೆಗೆ ಶೇ. 90% ರಷ್ಟು ಹಾಗೂ ಇತರೆ ರೈತರಿಗೆ ಶೇ.55% ರಷ್ಟು ಸಹಾಯಧನ ನೀಡಲಾಗುವುದು. 

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಬಹುದು ಎಂದು ಇಲಾಖೆ ಪಬ್ಲಿಕ್ ನೆಕ್ಸ್ಟ್ ಮೂಲಕ ತಿಳಿಸಿದೆ.