ಕುಂದಗೋಳ: ಜೆಡಿಎಸ್ ಪಕ್ಷಕ್ಕೆ ಹಜರತ್'ಅಲಿ ಜೋಡಮನಿ ರಾಜೀನಾಮೆ

ಕುಂದಗೋಳ: ಜೆಡಿಎಸ್ ಪಕ್ಷಕ್ಕೆ ಹಜರತ್'ಅಲಿ ಜೋಡಮನಿ ರಾಜೀನಾಮೆ

ಕುಂದಗೋಳ: ಜೆಡಿಎಸ್ ಪಕ್ಷದ ಸಂಘಟನೆ ಮೂಲಕವೇ ಹೆಸರಾಗಿ ಎರಡು ಬಾರಿ ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಟಿಕೆಟ್ ಪಡೆದು ಚುನಾವಣೆಯಲ್ಲಿ ಪರಾಭವಗೊಂಡಿದ್ದ ಹಜರತ್'ಅಲಿಶೇಖ್ ಜೋಡಮನಿ ಇದೀಗ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. 

ಹೌದು. ಇಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ನಿವಾಸಕ್ಕೆ ತೆರಳಿ ಜೆಡಿಎಸ್ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಜರತ್'ಅಲಿಶೇಖ್ ಜೋಡಮನಿ ನಿರ್ಧಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. 

ಇದಲ್ಲದೆ ಕುಂದಗೋಳ ಮತಕ್ಷೇತ್ರದಲ್ಲಿ ಜೆಡಿಎಸ್ ಎಂಬ ಹೆಸರನ್ನು ಪ್ರಭಾವಗೊಳಿಸಿದ್ದು, ಇದೇ ಹಜರತ್'ಅಲಿ ಜೋಡಮನಿ ಇದೀಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಪುನಃ ಮುಂದಿನ ನಡೆ ಏನು? ಎಂಬುದು ಸದ್ಯದ ಪ್ರಶ್ನೆಯಾಗಿದೆ.