ಅಣ್ಣಿಗೇರಿ: ಜೈನ ಬಸದಿಯಲ್ಲಿ ಭಗವಾನ್ ಮಹಾವೀರ 2621ನೇ ಜಯಂತಿ ಆಚರಣೆ

ಅಣ್ಣಿಗೇರಿ: ಜೈನ ಬಸದಿಯಲ್ಲಿ ಭಗವಾನ್ ಮಹಾವೀರ 2621ನೇ ಜಯಂತಿ ಆಚರಣೆ

ಅಣ್ಣಿಗೇರಿ: ಜೈನ ಬಸದಿಯಲ್ಲಿ ಭಗವಾನ್ ಮಹಾವೀರ 2621ನೇ ಜಯಂತಿಯನ್ನು ಸಮಾಜ ಬಾಂಧವರು ವಿಜೃಂಭಣೆಯಿಂದ ಆಚರಣೆ ಮಾಡಿದರು.ಬಸದಿಯಲ್ಲಿ ಮುಂಜಾನೆಯಿಂದಲೇ ಪಲ್ಲಕ್ಕಿ ಉತ್ಸವ 24 ತೀರ್ಥಂಕರರ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿದವು. ಕಾರ್ಯಕ್ರಮದಲ್ಲಿ ದಾಸೋಹ ಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸಿ ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ ಎಂದು ಮಾತನಾಡಿದರು. ಈ ವೇಳೆ ಮಾಜಿ ಶಾಸಕರಾದ ಎನ್. ಹೆಚ್. ಕೋನರೆಡ್ಡಿ, ಶಿವಾನಂದ್ ಕರಿಗಾರ, ಪ್ರಕಾಶ್ ಅಂಗಡಿ, ಷಣ್ಮುಖ ಗುರಿಕಾರ್, ರವಿರಾಜ್ ವರ್ಣೇಕರ್ ಹಾಗೂ ಸಮಾಜದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.