ಲೋಕಪಾಲ್ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದ ಖಾನ್ವಿಲ್ಕರ್

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಯ್ ಮಾಣಿಕ್ರಾವ್ ಖಾನ್ವಿಲ್ಕರ್ (66) ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಲೋಕಪಾಲ ಅಧ್ಯಕ್ಷರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಖಾನ್ವಿಲ್ಕರ್ ಅವರು ಮೇ 2016 ರಿಂದ ಜುಲೈ 2022ರವರೆಗೆ ಸುಪ್ರೀಂ ಕೋರ್ಟ್ ಪೀಠದಲ್ಲಿ ಸೇವೆ ಸಲ್ಲಿಸಿದ್ದರು. ಮೇ 27, 2022ರಂದು ಪಿನಾಕಿ ಚಂದ್ರ ಘೋಸ್ ಅವರ ನಿವೃತ್ತಿಯ ನಂತರ ಸುಮಾರು ಎರಡು ವರ್ಷಗಳ ಕಾಲ ಖಾಲಿಯಾದ ಸ್ಥಾನವನ್ನು ಇದೀಗ ಖಾನ್ವಿಲ್ಕರ್ ಅವರು ತುಂಬುತ್ತಿದ್ದಾರೆ.