ರಾಜ್ಯ ಸರ್ಕಾರಕ್ಕೆ 1,402 ಕೋಟಿ ರೂ. ಚೆಕ್ ಹಸ್ತಾಂತರಿಸಿದ ಕರ್ನಾಟಕ ರಾಜ್ಯ ಖನಿಜ ನಿಗಮ

ರಾಜ್ಯ ಸರ್ಕಾರಕ್ಕೆ 1,402 ಕೋಟಿ ರೂ. ಚೆಕ್ ಹಸ್ತಾಂತರಿಸಿದ ಕರ್ನಾಟಕ ರಾಜ್ಯ ಖನಿಜ ನಿಗಮ

ಬೆಂಗಳೂರು: ಕರ್ನಾಟಕ ರಾಜ್ಯ ಖನಿಜ ನಿಗಮ ಲಿಮಿಟೆಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ರಾಜ್ಯ ಸರ್ಕಾರಕ್ಕೆ 1402 ಕೋಟಿ ರೂ. ಮೌಲ್ಯದ ಚೆಕ್‌ಗಳನ್ನು ಶುಕ್ರವಾರ ವಿತರಿಸಿದೆ. 

ಈ ವರ್ಷದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ, ನಿಗಮದ ಷೇರುದಾರನಾಗಿರುವ ಸರ್ಕಾರಕ್ಕೆ ಲಾಭಾಂಶ ಹಾಗೂ ವಿಶೇಷ ಲಾಭಾಂಶದ ಚೆಕ್ ಸೇರಿ 1402 ಕೋಟಿ ರೂ. ಮೊತ್ತವನ್ನು ಮೂರು ಪ್ರತ್ಯೇಕ ಚೆಕ್‌ಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.