ಡಿಸಿಇಟಿ-2025 : ಫಲಿತಾಂಶ ಪ್ರಕಟ

ಡಿಸಿಇಟಿ-2025 : ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿಸಿಇಟಿ-2025 ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. 

ಕೆಇಎ ವೆಬ್‌ಸೈಟ್‌ನಲ್ಲಿ ಲಿಂಕ್ ಬಿಟ್ಟಿದ್ದು, ಅಭ್ಯರ್ಥಿಗಳು ತಮ್ಮ ಫಲಿತಾಂಶ ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಪರೀಕ್ಷೆ ಬರೆದಿದ್ದ ಸುಮಾರು 20,346 ಅಭ್ಯರ್ಥಿಗಳ Rank ಘೋಷಣೆ ಮಾಡಿದ್ದು, ಸರ್ಕಾರದಿಂದ ಸೀಟ್ ಮ್ಯಾಟ್ರಿಕ್ಸ್ ಬಂದ ಬಳಿಕ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ಎಂಜಿನಿಯರಿಂಗ್ ನ 3ನೇ ಸೆಮಿಸ್ಟರ್ ಅಥವಾ ಎರಡನೇ ವರ್ಷಕ್ಕೆ ನೇರ ಪ್ರವೇಶ ನೀಡಲು ಡಿಪ್ಲೊಮಾ ಉತ್ತೀಣರಾದ ಅಭ್ಯರ್ಥಿಗಳಿಗೆ ಡಿಸಿಇಟಿ ನಡೆಸಲಾಗುತ್ತದೆ. ಪ್ರತಿ ಎಂಜಿನಿಯರಿಂಗ್ ಕಾಲೇಜಿ‌ನಲ್ಲಿ ಈ ರೀತಿ ಡಿಪ್ಲೊಮಾ ಮುಗಿಸಿದವರಿಗೆ ಶೇ 10ರಷ್ಟು ಸೀಟು ಮೀಸಲಿರುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

2025-26ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ (ಎಂಡಿಎಸ್) ಪ್ರವೇಶಕ್ಕೆ ಅರ್ಹರಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 

ಅರ್ಜಿ ಸಲ್ಲಿಸಲು ಕೆಇಎ ವೆಬ್ ಸೈಟ್ ನಲ್ಲಿ ಲಿಂಕ್ ಬಿಟ್ಟಿದ್ದು, ಜೂನ್ 29ರವರಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಜೂನ್ 30 ಕೊನೆ ದಿನ ಎಂದು ಪ್ರಸನ್ನ ತಿಳಿಸಿದ್ದಾರೆ. ಮೂಲ ದಾಖಲೆಗಳ ಪರಿಶೀಲನೆ ಜೂನ್‌ 30ರಿಂದ ನಡೆಯಲಿದ್ದು, ಇದಕ್ಕೆ 27ರಂದು ಮುಂಗಡ ದಿನಾಂಕ ನಿಗದಿಗೆ‌ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಕ್ಲಾಸ್ ಎ ಮತ್ತು ‌ವೈ ಕ್ಲೇಮ್‌ ಮಾಡಿರುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ. ಒಂದು ವೇಳೆ ಅವರು ಎನ್ ಆರ್ ಐ ವಾರ್ಡ್ ಅಥವಾ ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ ಕೋರಿದ್ದಲ್ಲಿ ಮಾತ್ರ ಅಂತಹವರು ದಾಖಲೆ ಪರಿಶೀಲನೆ ಗೆ ಬರಬೇಕಾಗುತ್ತದೆ. ಉಳಿದಂತೆ ಕ್ಲಾಸ್ ಬಿ, ಸಿ, ಡಿ, ಇ, ಎಫ್, ಜಿ, ಝೆಡ್ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಸ್ಲಾಟ್ ಬುಕ್‌ ಮಾಡಿಕೊಂಡು ದಾಖಲೆ ಪರಿಶೀಲನೆಗೆ ಬರಬೇಕು ಎಂದು ಅವರು ವಿವರಿಸಿದ್ದಾರೆ.