BREAKING : ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ಇಸ್ರೋ SpaDeX ರಾಕೆಟ್

BREAKING : ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ಇಸ್ರೋ SpaDeX ರಾಕೆಟ್

ಶ್ರೀಹರಿಕೋಟಾ : ಚಂದ್ರಯಾನ 3 ಸೇರಿದಂತೆ ಹಲವು ಯಶಸ್ವಿ ಯೋಜನೆಗಳನ್ನು ಇಸ್ರೋ ಸಾಧಿಸಿದೆ. ಇದೀಗ ಇಸ್ರೋ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ. 

PSLV-ಸಿ60 ರಾಕೆಟ್ ಮೂಲಕ ಸ್ಪೇಸ್ ಡಾಕಿಂಗ್(SpaDeX) ಪ್ರಯೋಗ ಉಡಾವಣೆ ಯಶಸ್ವಿಯಾಗಿ ಮಾಡಿದೆ. 30 Dec, 10:00:15 PM ಗಂಟೆಗೆ ಸರಿಯಾಗಿ PSLV-ಸಿ60 ರಾಕೆಟ್ ನಭೋಮಂಡಲಕ್ಕೆ ಚಿಮ್ಮಿತ್ತು. ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಡಾಕಿಂಗ್ ಮಾಡುವ ಈ ಯೋಜನೆ ಇಸ್ರೋ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. 

ಈ ಮೂಲಕ ಸ್ಪೇಸ್‌ ಡಾಕಿಂಗ್‌ ತಂತ್ರಜ್ಞಾನ ಹೊಂದಿದೆ ಜಗತ್ತಿನ ನಾಲ್ಕನೇ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತಕ್ಕೂ ಮೊದಲು ಅಮೇರಿಕ, ಚೀನಾ, ರಷ್ಯಾ ಈ ತಂತ್ರಜ್ಞಾನ ಬಳಸಿಕೊಂಡಿದೆ.