ಬ್ರೇಕಿಂಗ್ : ಲಾಲು ಮೇವು ತಿಂದಿದ್ದು ನಿಜ.. ತೀರ್ಪು ಪ್ರಕಟಿಸಿದ ಕೋರ್ಟ್

ಬ್ರೇಕಿಂಗ್ : ಲಾಲು ಮೇವು ತಿಂದಿದ್ದು ನಿಜ.. ತೀರ್ಪು ಪ್ರಕಟಿಸಿದ ಕೋರ್ಟ್

ರಾಂಚಿ : ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾ ದಳ ನಾಯಕ ಲಾಲೂ ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಆರೋಪಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಫೆಬ್ರವರಿ 15 ರಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು 139.35 ಕೋಟಿ ಡೊರಾಂಡಾ ಖಜಾನೆ ಅವ್ಯವಹಾರ ಪ್ರಕರಣದಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ನೀಡಿದೆ. ಮೇವು ಹಗರಣದ ಇತರ ನಾಲ್ಕು ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಗೆ ಗುರಿಯಾಗಿರುವ ಪ್ರಸಾದ್ ಐದನೇ ಮತ್ತು ಅಂತಿಮ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇನ್ನು ಐದನೇ ಆರೋಪದ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಹಾಜರಾಗಲು ಆರ್ ಜೆಡಿ ಮುಖ್ಯಸ್ಥ ಲಾಲು ಭಾನುವಾರ ರಾಂಚಿಗೆ ಆಗಮಿಸಿದರು. ಪ್ರಸಾದ್ ಅವರನ್ನು ಒಳಗೊಂಡಿರುವ 139.35 ಕೋಟಿ ರೂ. ಡೊರಾಂಡಾ ಖಜಾನೆ ಅವ್ಯವಹಾರ ಪ್ರಕರಣದಲ್ಲಿ ಜನವರಿ 29 ರಂದು ನ್ಯಾಯಾಲಯವು ವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು. 1996ರ ಜನವರಿಯಲ್ಲಿ ಪಶು ಸಂಗೋಪನಾ ಇಲಾಖೆ ಮೇಲೆ ದಾಳಿ ನಡೆಸಿದ ಬಳಿಕ ಮೇವು ಹಗರಣ ಬೆಳಕಿಗೆ ಬಂದಿತ್ತು.ಸಿಬಿಐ ಜೂನ್ 1997 ರಲ್ಲಿ ಪ್ರಸಾದ್ ಅವರನ್ನು ಆರೋಪಿ ಎಂದು ಹೆಸರಿಸಿತು. ಇನ್ನು ಮೇವು ಹಗರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 2013 ರಲ್ಲಿ, ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಪ್ರಸಾದ್ ಗೆ ಜಾಮೀನು ನೀಡಿತು ಮತ್ತು ಡಿಸೆಂಬರ್ 2017 ರಲ್ಲಿ ಸಿಬಿಐ ನ್ಯಾಯಾಲಯವು ಅವರನ್ನು ಮತ್ತು ಇತರ 15 ಜನರನ್ನು ತಪ್ಪಿತಸ್ಥರೆಂದು ಘೋಷಿಸಿ ಬಿರ್ಸಾ ಮುಂಡಾ ಜೈಲಿಗೆ ಕಳುಹಿಸಿತು.