ಮುಂದಿನ ಸಲ ಕಪ್ ನಮ್ದೇ - ಸೋಲಿನೊಂದಿಗೆ ಮಹಿಳಾ IPLಗೆ ಆರ್ಸಿಬಿ ಗುಡ್ ಬೈ

WPl ಟೂರ್ನಿಯ 19ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿದೆ. ಮುಂಬೈ 16.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಮಹಿಳಾ ಐಪಿಎಲ್ನ ಅಂತಿಮ ಪಂದ್ಯದಲ್ಲಿಯೂ ಬೆಂಗಳೂರು ತಂಡ ಸೋಲನ್ನಪ್ಪಿತು. ಈ ಮೂಲಕ 2023ರ ಮೊದಲ ಸೀಸನ್ಗೆ ಗುಡ್ ಬೈ ಹೇಳಿದೆ. ಇತ್ತ ಪಂದ್ಯ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಇಬ್ಬರೂ 29 ರನ್ ಗಳಿಸಿದರು. ಬಿಟ್ಟರೆ ನಾಯಕಿ ಸ್ಮೃತಿ ಮಂಧಾನ 24 ರನ್ ಗಳಿಸಿದ್ದೇ ಅತ್ಯದಿಕ ಸ್ಕೋರ್ ಆಗಿದೆ.
ಈ ಮೂಲಕ 8 ಪಂದ್ಯಗಳಲ್ಲಿ ಆರ್ಸಿಬಿ ತಂಡ ಕೇವಲ 2 ಪಂದ್ಯ ಗೆದ್ದು 6ರಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಅದರಂತೆ 8ರಲ್ಲಿ 6ರಲ್ಲಿ ಗೆದ್ದು 2ರಲ್ಲಿ ಸೋಲುವ ಮೂಲಕ ಮುಂಬೈ ಮುಂದಿನ ಹಂತಕ್ಕೆ ತಲುಪಿದೆ.
ಆರ್ಸಿಬಿ ತಂಡವು ಸೋಲಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಅಭಿಯಾನ ಅಂತ್ಯಗೊಳಿಸಿದೆ. ಈ ಮೂಲಕ ಅಭಿಮಾನಿಗಳ ಕನಸು ಮತ್ತೊಮ್ಮೆ ಕನಸಾಗಿಯೇ ಉಳಿದಿತು. ಮೊದಲ ಸೀಸನ್ನಲ್ಲಿ ಆರ್ಸಿಬಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಕಣಕ್ಕಿಳಿದಿತ್ತು.