ಐಪಿಎಲ್ ನ 2 ಹೊಸ ತಂಡಗಳ ಹರಾಜಿಗೆ ಡೇಟ್ ಫಿಕ್ಸ್

ಐಪಿಎಲ್ ನ 2 ಹೊಸ ತಂಡಗಳ ಹರಾಜಿಗೆ ಡೇಟ್ ಫಿಕ್ಸ್

ಬಿಸಿಸಿಐ 2022ರ ಐಪಿಎಲ್ ಕೂಟಕ್ಕೆ ತಯಾರಿ ನಡೆಸುತ್ತಿದೆ. ಮುಂದಿನ ಆವೃತ್ತಿಯ ಐಪಿಎಲ್ ನಲ್ಲಿ ಎರಡು ಹೆಚ್ಚುವರಿ ತಂಡಗಳು ಕಣಕ್ಕಿಳಿಯಲಿದೆ ಎಂದು ಈಗಾಗಲೇ ಬಿಸಿಸಿಐ ತಿಳಿಸಿದೆ. ಈ ಎರಡು ತಂಡಗಳ ಬಗ್ಗೆ ಅಂತಿಮಗೊಳಿಸಲು ಬಿಸಿಸಿಐ ಸಜ್ಜಾಗಿದೆ. 

ಮೂಲಗಳ ಪ್ರಕಾರ ಅ.17ರಂದು ಈ ಎರಡು ತಂಡಗಳಿಗಾಗಿ ಹರಾಜು ನಡೆಯಲಿದೆ. ಅಂದು ಎರಡು ಹೆಚ್ಚುವರಿ ತಂಡಗಳು ಯಾವುದು? ಯಾವ ನಗರವನ್ನು ಪ್ರತಿನಿಧಿಸುತ್ತದೆ ಮತ್ತು ಯಾರು ಮಾಲಕರು ಎನ್ನುವ ಮಾಹಿತಿ ಬಹುತೇಕ ಅಂದೇ ತಿಳಿಯಲಿದೆ.