IPL 2024 : ಗಾಯಕ್ವಾಡ ಶತಕ, ದುಬೆ ಫಿಫ್ಟಿ - ಲಕ್ನೋ ತಂಡಕ್ಕೆ 211 ರನ್‌ಗಳ ಗುರಿ ನೀಡಿದ ಚೆನ್ನೈ

ಚೆನ್ನೈ: ನಾಯಕ ಋತುರಾಜ ಗಾಯಕ್ವಾಡ ಶತಕ ಹಾಗೂ ಶಿವಂ ದುಬೆ ಸ್ಫೋಟಕ ಅರ್ಧಶತಕದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 211 ರನ್‌ಗಳ ಗುರಿ ನೀಡಿದೆ.
ಚೆನ್ನೈನಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದೆ. ತಂಡದ ಪರ ನಾಯಕ ಋತುರಾಜ ಗಾಯಕ್ವಾಡ 108* ರನ್ ಹಾಗೂ ಶಿವಂ ದುಬೆ 66 ರನ್ ಗಳಿಸಿದರು.