IPL 2024 | DCvsCSK : ವಾರ್ನರ್, ಪಂತ್ ಫಿಫ್ಟಿ - ಚೆನ್ನೈಗೆ 192 ರನ್‌ಗಳ ಗುರಿ ನೀಡಿದ ಡೆಲ್ಲಿ

ವಿಶಾಖಪಟ್ಟಣಂ: ಡೇವಿಡ್ ವಾರ್ನರ್, ನಾಯಕ ರಿಷಬ್ ಪಂತ್ ಅರ್ಧಶತಕ ಹಾಗೂ ಪೃಥ್ವಿ ಶಾ ಉತ್ತಮ ಆರಂಭಿಕ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ಗೆ 192 ರನ್‌ಗಳ ಗುರಿ ನೀಡಿದೆ.
ವಿಶಾಖಪಟ್ಟಣಂ ಮೈದಾನದಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 2024ರ ಆವೃತ್ತಿಯ 13ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ತಂಡದ ಪರ ಡೇವಿಡ್ ವಾರ್ನರ್ 52 ರನ್, ನಾಯಕ ರಿಷಬ್ ಪಂತ್ 51 ರನ್, ಪೃಥ್ವಿ ಶಾ 43 ರನ್ ಗಳಿಸಿರು.
ಇನ್ನು ಚೆನ್ನೈ ಪರ ಮತೀಶ ಪತಿರಾನ 3 ವಿಕೆಟ್ ಉರುಳಿದರೆ, ಮುಸ್ತಫಿಜುರ್ ರೆಹಮಾನ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದುಕೊಂಡರು.