IND vs WI: ಏಕದಿನ ಸರಣಿ ಗೆದ್ದ ಭಾರತ!

IND vs WI:  ಏಕದಿನ ಸರಣಿ ಗೆದ್ದ ಭಾರತ!

ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಜಯಗಳಿಸಿದೆ. ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತ್ತು. ಸತತ ಮೂರನೇ ಗೆಲುವಿನೊಂದಿಗೆ ಭಾರತ ತಂಡ ವಿಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಅಂತಿಮ ಏಕದಿನವನ್ನು 96 ರನ್ನುಗಳಿಂದ ಗೆದ್ದ ಭಾರತಕ್ಕೆ 3-0 ಸರಣಿ ಕೈವಶವಾಗಿದೆ.