13 ವರ್ಷದ ಹಿಂದಿನ ರೋಹಿತ್ ಶರ್ಮಾರ ದಾಖಲೆ ಮುರಿದ ಜೈಸ್ವಾಲ್

ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಮಾಡಿ ಮಿಂಚಿದರು. ಅವರು ಕೇವಲ 51 ಎಸೆತಗಳಲ್ಲಿ ಅಜೇಯ 84 ರನ್ ಸಿಡಿಸಿದರು. ಇದೇ ಪಂದ್ಯದ ಬಳಿಕ ಯಶಸ್ವಿ ಜೈಸ್ವಾಲ್ ಅವರು ಸುಮಾರು 13 ವರ್ಷಗಳ ಹಿಂದಿನ ರೋಹಿತ್ ಶರ್ಮಾ ದಾಖಲೆಯೊಂದನ್ನು ಮುರಿದರು.
ಜೈಸ್ವಾಲ್ ಟಿ20 ಪಂದ್ಯದಲ್ಲಿ 75 ಪ್ಲಸ್ ರನ್‌ಗಳನ್ನು ದಾಖಲಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟರ್ ಎಂಬ ದಾಖಲೆ ಮಾಡಿದ್ದಾರೆ. ಜೈಸ್ವಾಲ್ ಅವರು 21 ವರ್ಷ ಮತ್ತು 227 ದಿನಗಳಲ್ಲಿ ಈ ಸಾಧನೆ ಮಾಡಿದರು, 23 ವರ್ಷ ಏಳು ದಿನಗಳಲ್ಲಿ ಅರ್ಧಶತಕ ಸಿಡಿಸಿದ್ದ ದಾಖಲೆಯನ್ನು ಹೊಂದಿದ್ದ ರೋಹಿತ್ ಅವರನ್ನು ಹಿಂದಿಕ್ಕಿದರು.