ಹುಬ್ಬಳ್ಳಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ ಭರವಸೆ

ಹುಬ್ಬಳ್ಳಿ: ನಾಳೆಯಿಂದ ಬೆಳಗಾವಿ ಅಧಿವೇಶ ಆರಂಭವಾಗುತ್ತೆ. ಈಗಾಗಲೇ ಎಲ್ಲಾ ತಯಾರಿ ಮಾಡಿದ್ದೆವೆ. ಈ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ. ಅಧಿವೇಶನದಲ್ಲಿ ಅಭಿವೃದ್ದಿ ಬಗ್ಗೆಯೇ ಚರ್ಚೆಯಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಮತಾಂತರ ನಿಷೇದ ಕಾಯ್ದೆ ಮಂಡನೆ ವಿಚಾರವಾಗಿ ಮಾತನಾಡಿದ ಅವರು, ಹಿಂದೂ,ಇಸ್ಲಾಂ,ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿವೆ.ಅವರಿಗೆ ಯಾವುದೇ ಆತಂಕ ಬೇಡ. ಈಗಾಗಲೇ ಕ್ರಿಶ್ಚಿಯನ್ ಸಮುದಾಯ ನಾಯಕರಿಗೆ ನಾನು ಹೇಳಿದ್ದೆನೆ. ಅವರಿಗೆ ಯಾವುದೇ ತೊಂದರೆಯಾಗಲ್ಲ. ಬದಲಾಗಿ ಬಡತನವನ್ನು ದುರುಪಯೊಗ ಮಾಡಿಕೊಂಡು ಮತಾಂತರ ಮಾಡೋದು ತಪ್ಪು ಎಂದು ಅವರು ಹೇಳಿದರು. ಆಸೆ ಆಮೀಷ ಒಡ್ಡಿ ಮತಾಂತರ ಆಗೋದಕ್ಕೆ ಅವಕಾಶವಿಲ್ಲ. ಮತಾಂತರ ಕಾಯ್ದೆ ಚರ್ಚೆಗೆ ಮೊದಲು ಒಂದು ಕಮೀಟಿ ಮಾಡಿದ್ದೆವೆ. ಕಾನೂನು ಇಲಾಖೆಯ ಕಮೀಟಿ ಪರಿಶಿಲನೆ ಮಾಡ್ತಿದೆ. ಆ ವರದಿ ನಮ್ಮ ಕ್ಯಾಬಿನೆಟ್ ಗೆ ಬರುತ್ತೆ. ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸುತ್ತೆವೆ. ಅಲ್ಲಿಂದ ಅಸೆಂಬ್ಲಿಗೆ ಬಂದರೆ ಬೆಳಗಾವಿಯಲ್ಲೆ ಚರ್ಚೆ ಮಾಡುತ್ತೇವೆ. ಯಾವ ಧರ್ಮಕ್ಕೂ ಆತಂಕವಾಗಬಾರದು. ಮತಾಂತರ ಎನ್ನೋದು ಸಮಾಜಕ್ಕೆ ಒಳ್ಳೆಯದಲ್ಲ. ಕಾನೂನನ್ನು ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು. ಓಮಿಕ್ರಾನ್ ಟೆಸ್ಟಿಂಗ್ ಲ್ಯಾಬ್ ಗಳನ್ನ ಹೆಚ್ಚಿಗೆ ಮಾಡುತ್ತೆವೆ. ಈಗಾಗಲೆ ಒಂದು ಜಿನೊಮಿಕ್ ಸ್ವಿಕ್ವೇನ್ಸ್ ಲ್ಯಾಬ್ ಅದನ್ನು ಹೆಚ್ಚಿಗೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಮೋದಿ ಟ್ವಿಟರ್ ಹ್ಯಾಕ್ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಪ್ರಧಾನಿಗಳು ರಿಯಾಕ್ಟ್ ಮಾಡಿದ್ದಾರೆ. ಅದರ ವಿರುದ್ದ ಕಾರ್ಯಚರಣೆ ಕೂಡಾ ಮಾಡಿದ್ದಾರೆ. ಈ ರೀತಿ ಅಲ್ಲಲ್ಲಿ ಘಟನೆಗಳು ಆಗ್ತಿವೆ.ತಾಂತ್ರಿಕ ಬಲದಿಂದ ಅವುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.