ಹುಬ್ಬಳ್ಳಿ: ಮೊಳೆ ಮುಕ್ತ ಮರ ಅಭಿಯಾನಕ್ಕೆ ವಿ.ಎಸ್.ವಿ.ಪ್ರಸಾದ ಚಾಲನೆ...!

ಹುಬ್ಬಳ್ಳಿ: ಮೊಳೆ ಮುಕ್ತ ಮರ ಅಭಿಯಾನಕ್ಕೆ ವಿ.ಎಸ್.ವಿ.ಪ್ರಸಾದ ಚಾಲನೆ...!

ಹುಬ್ಬಳ್ಳಿ: ಸ್ವರ್ಣಾ ಗ್ರೂಪ್ ಆಫ್ ಕಂಪನಿಸ್ ಹಾಗೂ ವಸುಂಧರ ಫೌಂಡೇಶನ್ ಸಹಯೋಗದೊಂದಿಗೆ ಪರಿಸರ ಸಂರಕ್ಷಣೆ ಹೊಣೆ ಹೊತ್ತು ಮೊಳೆ ಮುಕ್ತ ಮರ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಮರಗಳಿಗೆ ಹೊಡೆದಿರುವ ಮೊಳೆಯನ್ನು ತೆಗೆಯುವ ವಿನೂತನ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ಕೆ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ವಿ.ಎಸ್. ವಿ ಪ್ರಸಾದ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮರಗಳಿಗೂ ನಮ್ಮ ಹಾಗೇ ಜೀವವಿದೆ. ನಮಗೆ ಪ್ರಾಣವಾಯು ಆಮ್ಲಜನಕ ಒದಗಿಸುವ ಮರಗಳಿಗೆ ಮೂರ್ಖ ಮಾನವ ಮೊಳೆಯನ್ನು ಹೊಡೆದು ಪರಿಸರ ಹಾನಿ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು. ಇನ್ನೂ ಹುಬ್ಬಳ್ಳಿಯಲ್ಲಿನ ಬಹುತೇಕ ಮರಗಳಿಗೆ ಹೊಡೆದಿರುವ ಮೊಳೆಯನ್ನು ತೆಗೆಯುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.