ಹುಬ್ಬಳ್ಳಿ: ಬೆಂಗಳೂರಿನಂತೆ ಉತ್ತರ ಕರ್ನಾಟಕದ ನಗರಗಳು ಅಭಿವೃದ್ಧಿ ಹೊಂದಬೇಕು: ಸಿಎಂ‌ ಬೊಮ್ಮಾಯಿ...!

ಹುಬ್ಬಳ್ಳಿ: ಬೆಂಗಳೂರಿನಂತೆ ಉತ್ತರ ಕರ್ನಾಟಕದ ನಗರಗಳು ಅಭಿವೃದ್ಧಿ ಹೊಂದಬೇಕು: ಸಿಎಂ‌ ಬೊಮ್ಮಾಯಿ...!

ಹುಬ್ಬಳ್ಳಿ: ಬೆಂಗಳೂರಿನಂತೆ ಉತ್ತರ ಕರ್ನಾಟಕದ ನಗರಗಳು ಅಭಿವೃದ್ಧಿ ಹೊಂದಬೇಕು. ಅದರಲ್ಲೂ ಕಲಬುರಗಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ ಅಭಿವೃದ್ಧಿ ಹೊಂದಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಬಿಯಾಂಡ್ ಬೆಂಗಳೂರು ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,ಪುಣೆ ಬಿಟ್ಟರೆ ಬೆಂಗಳೂರುವರೆಗೂ ಒಂದೇ ಇಂಜಿನಿಯರಿಂಗ್ ಕಾಲೇಜು ಇತ್ತು. ಈಗ ಪ್ರತಿಯೊಂದು ತಾಲೂಕಿನಲ್ಲಿ ಕಾಲೇಜಿದೆ. ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯವಿದೆ, ಅವರಿಗೆ ಸಹಕಾರ ಬೇಕಿದೆ. ಸರ್ಕಾರದಿಂದ ಅವಕಾಶಗಳು ಬೇಕು, ಅವರನ್ನ ಗುರುತಿಸಬೇಕಿದೆ. ಕರ್ನಾಟಕ ಈಗ ಸ್ಟಾರ್ಟ್ ಅಪ್ ನಂಬರ್ ಒನ್ ಆಗುತ್ತಿದೆ ಎಂದರು. ಪ್ರೌಢ ಶಾಲೆ ತಂತ್ರಜ್ಞಾನ ಬಳಸಿ ಹೊಸ ಹೊಸ ಪ್ರಯೋಗ ಮಾಡಲಿ. ಪಾಲಿಟೆಕ್ನಿಕ್ ಅಭಿವೃದ್ಧಿ ಸಹ ಪಡಿಸಬೇಕಿದೆ.ಕೌಶಲ್ಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.