ಹುಬ್ಬಳ್ಳಿ : ಅಂಜಲಿ ಕುಟುಂಬಕ್ಕೆ ಅಂಜುಮನ್ ಸಂಸ್ಥೆ ಸಾಂತ್ವನ - ಧೈರ್ಯ ತುಂಬಿದ ಮುಖಂಡರು

ಹುಬ್ಬಳ್ಳಿ : ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಅಂಜಲಿ ನಿವಾಸಕ್ಕೆ ಅಂಜುಮನ್ ಇಸ್ಲಾಂ ಪದಾಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ನೇತೃತ್ವದಲ್ಲಿ ಭೇಟಿ ನೀಡಿ ಅಂಜಲಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆ ಕುರಿತು ಮಾಹಿತಿ ಪಡೆದುಕೊಂಡ ಮಾಜಿ ಸಚಿವರು, ಸಮಿತಿ ಪದಾಧಿಕಾರಿಗಳು, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಇನ್ನು, ಆರ್ಥಿಕ ಸಹಾಯ ಮಾಡಿದ ಅಂಜುಮನ್ ಪದಾಧಿಕಾರಿಗಳು, ಅಂಜಲಿ ಸಹೋದರಿಯರಿಗೆ ಆರ್ಥಿಕ ಸಹಾಯದ ಭರವಸೆ ಜೊತೆಗೆ ಅಂಜಲಿ ಕುಟುಂಬಕ್ಕೆ ಎಲ್ಲ ಬಗೆಯ ಸಹಾಯ ಸಹಕಾರದ ಭರವಸೆ ನೀಡಿದರು.