ಬ್ರೇಕಿಂಗ್: ಜೂನ್ 29ರಂದು ಮೇಯರ್, ಉಪಮೇಯರ್ ಚುನಾವಣೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯು ಜೂನ್ 29ಕ್ಕೆ ನಿಗದಿಯಾಗಿದೆ.
ಹೌದು.. ಮೇಯರ್, ಉಪಮೇಯರ್ 23ನೇ ಅವಧಿಗೆ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ-ಎ ಹಾಗೂ ಉಪಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ನೀಡಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.
ಇನ್ನು ಜೂನ್ 19ರಂದು ಅಂದರೇ ಇಂದಿಗೆ ಈ ಹಿಂದೆಯಿದ್ದ ಮೇಯರ್-ಉಪಮೇಯರ್ ಅವಧಿ ಪೂರ್ಣಗೊಂಡಿದ್ದು, ಈಗ 23ನೇ ಅವಧಿಗೆ ಜೂನ್-29ರಂದು ಚುನಾವಣೆ ನಡೆಯಲಿದೆ.