ಮಾರ್ಕ್ಸ್ ಕಾರ್ಡ್‌ಗೆ ಗುಡ್ ಬೈ - ಮಕ್ಕಳ ಸಮಗ್ರ ವರದಿ ಈಗ ಮೊಬೈಲ್‌ಗೆ: ಶಿಕ್ಷಣ ಇಲಾಖೆಯ ಮಹತ್ವದ ಡಿಜಿಟಲ್ ನಡೆ!

ಮಾರ್ಕ್ಸ್ ಕಾರ್ಡ್‌ಗೆ ಗುಡ್ ಬೈ - ಮಕ್ಕಳ ಸಮಗ್ರ ವರದಿ ಈಗ ಮೊಬೈಲ್‌ಗೆ: ಶಿಕ್ಷಣ ಇಲಾಖೆಯ ಮಹತ್ವದ ಡಿಜಿಟಲ್ ನಡೆ!

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಡಿಜಿಲಾಕರ್‌ನಲ್ಲಿ ಲಭ್ಯವಾಗುವಂತೆ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದ ಶಿಕ್ಷಣ ಇಲಾಖೆ, ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಸಜ್ಜಾಗಿದೆ. 

ಎಲ್‌ಕೆಜಿಯಿಂದ ಪಿಯುಸಿವರೆಗಿನ ಪ್ರತಿ ಮಗುವಿನ ಶೈಕ್ಷಣಿಕ ಪ್ರಗತಿಯನ್ನು ಡಿಜಿಟಲ್ ರೂಪದಲ್ಲಿ ನೀಡಲು ಇಲಾಖೆ ಸಿದ್ಧತೆ ನಡೆಸಿದೆ. ಇಷ್ಟು ದಿನ ಪೋಷಕರು ತಮ್ಮ ಮಕ್ಕಳು ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಬಗ್ಗೆ ಅಂಕಪಟ್ಟಿಗಳ ಮೂಲಕ ಮಾಹಿತಿ ಪಡೆಯುತ್ತಿದ್ದರು. ಈಗ, ಡಿಜಿಟಲ್ ರೂಪದಲ್ಲಿ ಮಗುವಿನ ಸಮಗ್ರ ಶೈಕ್ಷಣಿಕ ಪ್ರಗತಿಯ ವರದಿಯನ್ನು ಪೋಷಕರ ಮೊಬೈಲ್ ಹಾಗೂ ಇ-ಮೇಲ್‌ಗೆ ಕಳುಹಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸುತ್ತಿದೆ. ಆಧುನಿಕ ವ್ಯವಸ್ಥೆ ಮೂಲಕ ಪೋಷಕರು ತಮ್ಮ ಮಕ್ಕಳ ಸಮಗ್ರ ಶೈಕ್ಷಣಿಕ ಪ್ರಗತಿಯನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದೆ.